August 8, 2026
Saturday, August 8, 2026
spot_img

ಪೂರಿ, ಉಪ್ಪಿಟ್ಟೆಲ್ಲಾ ತಿನ್ನೋದಿಲ್ಲ! ಪ್ರೋಟೀನೇ ಬೇಕು ಅಂದ್ರೆ ಈ ಪನೀರ್‌ ಕಾಯಿನ್‌ ಪರೋಟ ಟ್ರೈ ಮಾಡಿ

ನಾವು ಪೂರಿ, ಉಪ್ಪಿಟ್ಟು, ಅವಲಕ್ಕಿ ಇಂತಹ ತಿಂಡಿಗಳನ್ನು ಬೆಳಗ್ಗೆ ಬೆಳಗ್ಗೆ ತಿನ್ನೋದಿಲ್ಲ. ಪ್ರೋಟೀನ್‌ ಇರುವ ಯಾವುದಾದರೂ ತಿಂಡಿ ಹೇಳ್ತೀರಾ? ಎಂದು ನೀವು ಕೇಳೋದಾದ್ರೆ ನಿಮಗಾಗಿ ಬೆಸ್ಟ್‌ ರೆಸಿಪಿಯೊಂದನ್ನು ನಾವು ತಂದಿದ್ದೇವೆ. ಇದಕ್ಕೆ ಹೆಚ್ಚು ಸಮಯವೂ ಬೇಕಿಲ್ಲ. ಸ್ವಲ್ಪ ತಿಂದ ನಂತರ ಹೊಟ್ಟೆಯೂ ತುಂಬಿ ಹೋಗುತ್ತದೆ. ಬೇಗ ಹಸಿವು ಕೂಡ ಆಗೋದಿಲ್ಲ. ಯಾವುದೀ ರೆಸಿಪಿ? ಇಲ್ಲಿದೆ ಸಂಪೂರ್ಣ ಮಾಹಿತಿ..

ಕಾಯಿನ್‌ ಪರೋಟ ತಿಂದಿದ್ದೀರಿ, ಇದಕ್ಕೇ ಪ್ರೋಟೀನ್‌ ಟ್ವಿಸ್ಟ್‌ ನೀಡಿ ನಮಗೆ ಬೇಕಾದ ಹಾಗೆ ಪನೀರ್‌ ಪರೋಟ ಮಾಡಿಕೊಳ್ಳಬಹುದು. ಹೇಗೆ ನೋಡಿ..

ಸಾಮಾಗ್ರಿಗಳು: ಪನೀರ್‌, ಪಾಲಕ್‌ ಸೊಪ್ಪು, ಈರುಳ್ಳಿ, ಚಿಲ್ಲಿ ಫ್ಲೇಕ್ಸ್‌, ಆರಿಗ್ಯಾನೊ, ಕೊತ್ತಂಬರಿ ಸೊಪ್ಪು, ಗೋಧಿಹಿಟ್ಟು

ಮಾಡುವ ವಿಧಾನ

ಮೊದಲು ಪಾತ್ರೆಗೆ ನೀರು ಹಾಗೂ ಪಾಲಕ್‌ ಸೊಪ್ಪು ಹಾಕಿ ಬಿಸಿ ಮಾಡಿಕೊಳ್ಳಿ, ಆನಂತರ ಸೊಪ್ಪನ್ನು ತೆಗೆದು ತಣ್ಣಗಾಗಿಸಿ ರುಬ್ಬಿ ಪೇಸ್ಟ್‌ ಮಾಡಿಕೊಳ್ಳಿ. ಈ ಪೇಸ್ಟ್‌ನ್ನು ಗೋಧಿಹಿಟ್ಟಿಗೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಹತ್ತು ನಿಮಿಷ ನೆನೆಯೋಕೆ ಬಿಟ್ಟುಬಿಡಿ.

ಆನಂತರ ಒಂದು ಪಾತ್ರೆಗೆ ತುರಿದ ಪನೀರ್‌, ಈರುಳ್ಳಿ, ಚಿಲ್ಲಿ ಫ್ಲೇಕ್ಸ್‌, ಆರಿಗ್ಯಾನೊ, ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿಸಿ. ನಂತರ ಈ ಮಿಶ್ರಣವನ್ನು ಪಕ್ಕಕ್ಕೆ ಇಡಿ. ನಂತರ ಚಪಾತಿ ಹಿಟ್ಟು ರೆಡಿ ಆಯ್ತಾ ನೋಡ್ಕೊಳಿ.

ನಂತರ ಒಂದು ಚಪಾತಿ ಲಟ್ಟಿಸಿಕೊಂಡು ಅದರ ಮೇಲೆಲ್ಲಾ ಪನೀರ್‌ ಮಿಶ್ರಣ ಹರಡಿ, ಆನಂತರ ಅದೇ ಚಪಾತಿಯನ್ನು ಸುರುಳಿ ಸುತ್ತಿ. ನಂತರ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಕೈಯಲ್ಲಿ ಒಮ್ಮೆ ಲಟ್ಟಿಸಿದರೆ ಪನೀರ್‌ ಪರೋಟ ರೆಡಿಯಾಗುತ್ತದೆ. ಕಾದ ತವಾಗೆ ಬೆಣ್ಣೆ ಹಾಕಿ, ಇದನ್ನು ಬೇಯಿಸಿ ಬಿಸಿ ಬಿಸಿ ತಿಂದುಬಿಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !