ನಾವು ತಿನ್ನುವ ಪ್ರತಿಯೊಂದು ಆಹಾರಕ್ಕೂ ರುಚಿ ನೀಡುವುದು ನಮ್ಮ ನಾಲಿಗೆ. ಹಸಿವಿಗಷ್ಟೇ ಅಲ್ಲದೆ ಬಾಯಿ ಚಪಲಕ್ಕೆ ತಿನ್ನುವ ಆಹಾರಕ್ಕೂ ರುಚಿ ಮುಖ್ಯ. ಆದರೆ ಇದ್ದಕ್ಕಿದ್ದಂತೆ ನಾಲಿಗೆಯ ರುಚಿ ಮಂದವಾದರೆ ಅಥವಾ ಸಂಪೂರ್ಣ ಕಳೆದುಹೋದರೆ, ಅದು ಕೇವಲ ತಾತ್ಕಾಲಿಕ ಸಮಸ್ಯೆಯಲ್ಲ, ಕೆಲವೊಮ್ಮೆ ಗಂಭೀರ ಕಾಯಿಲೆಗಳ ಮುನ್ಸೂಚನೆಯೂ ಆಗಿರಬಹುದು. ವೈದ್ಯರು ಚಿಕಿತ್ಸೆ ನೀಡುವ ಮೊದಲು ನಾಲಿಗೆಯನ್ನು ಪರಿಶೀಲಿಸುವುದೂ ಇದೇ ಕಾರಣಕ್ಕೆ.
ಜ್ವರ ಮತ್ತು ರುಚಿ ಬದಲಾವಣೆ
ಜ್ವರ ಬಂದಾಗ ದೇಹದ ತಾಪಮಾನ ಮಾತ್ರವಲ್ಲ, ನಾಲಿಗೆಯ ರುಚಿಯ ಮೇಲೆಯೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ತಾತ್ಕಾಲಿಕವಾಗಿದ್ದರೂ ಕೆಲವೊಮ್ಮೆ ಇದು ಬೇರೆ ರೋಗಗಳ ಸೂಚನೆಯೂ ಆಗಬಹುದು.

ಮಧುಮೇಹದ ಪರಿಣಾಮ
ಮಧುಮೇಹ ರೋಗಿಗಳಲ್ಲಿ ನಾಲಿಗೆಯ ರುಚಿಯಲ್ಲಿ ಆಗಾಗ ಬದಲಾವಣೆ ಕಂಡುಬರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಳಿತಗೊಳ್ಳುವುದರಿಂದ ರುಚಿ ಅರಿವಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಹಲ್ಲು ಮತ್ತು ಬಾಯಿ ಸಮಸ್ಯೆಗಳು
ಹಲ್ಲಿನ ಕುಳಿ, ಒಸಡು ಉರಿಯೂತ ಅಥವಾ ಬಾಯಿಯ ಸ್ವಚ್ಛತೆ ಕಾಪಾಡದಿದ್ದರೆ ನಾಲಿಗೆಯ ರುಚಿ ಮಂದವಾಗುತ್ತದೆ. ಬಾಯಿ ಆರೋಗ್ಯ ಕಾಪಾಡಿಕೊಳ್ಳುವುದು ಈ ಸಮಸ್ಯೆ ತಪ್ಪಿಸಲು ಮುಖ್ಯ.

ನರ ವೈಜ್ಞಾನಿಕ ಕಾಯಿಲೆಗಳು
ಪಾರ್ಕಿನ್ಸನ್, ಆಲ್ಝೈಮರ್ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ ಮುಂತಾದ ನರಕ್ಕೆ ಸಂಬಂಧಿಸಿದ ಕಾಯಿಲೆಗಳು ನಾಲಿಗೆಯ ರುಚಿ ಅರಿವು ಕಡಿಮೆಯಾಗಲು ಕಾರಣವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ತಪಾಸಣೆ ಅವಶ್ಯಕ.
ಶೀತ–ಕೆಮ್ಮು
ಶೀತ ಮತ್ತು ಕೆಮ್ಮಿನ ಸಮಯದಲ್ಲಿ ರುಚಿ ಕಡಿಮೆಯಾಗುತ್ತದೆ. ಇದು ನಮ್ಮ ನಾಲಗೆಗೆ ಕಹಿ ರುಚಿಯನ್ನು ನೀಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
