September 27, 2026
Sunday, September 27, 2026
spot_img

SNACKS | ಹೊರಗಿನ ಜಂಕ್ ಫುಡ್‌ಗೆ ಗುಡ್ ಬೈ ಹೇಳಿ: ಮನೆಯಲ್ಲೇ ಮಾಡಿ ಹೆಲ್ದೀ ಬೇಬಿ ಕಾರ್ನ್ ಮಂಚೂರಿಯನ್

ಹೊರಗಿನ ಜಂಕ್ ಫುಡ್‌ನಲ್ಲಿರುವ ಮೈದಾ ಮತ್ತು ಕೆಮಿಕಲ್‌ಗಳು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದಕ್ಕೆ ಮನೆಯಲ್ಲೇ ಉತ್ತಮ ರುಚಿ ನೀಡಬಹುದು. ಯಾವುದೇ ಹಾನಿಕಾರಕ ಪದಾರ್ಥಗಳಿಲ್ಲದೆ, ಕೇವಲ 10 ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಗರಿಗರಿ ಬೇಬಿ ಕಾರ್ನ್ ಮಂಚೂರಿಯನ್ ಮಾಡುವ ಸರಳ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಬೇಬಿ ಕಾರ್ನ್

ಕಾರ್ನ್ ಫ್ಲೋರ್

ಈರುಳ್ಳಿ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಟೊಮೆಟೊ ಸಾಸ್

ಸೋಯಾ ಸಾಸ್

ಉಪ್ಪು ಮತ್ತು ಮೆಣಸಿನ ಪುಡಿ

ಎಣ್ಣೆ

ಮಾಡುವ ವಿಧಾನ

ಒಂದು ಬೌಲ್‌ನಲ್ಲಿ ಕತ್ತರಿಸಿದ ಹಸಿ ಬೇಬಿ ಕಾರ್ನ್, 3 ಚಮಚ ಕಾರ್ನ್ ಫ್ಲೋರ್, ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಕೇವಲ 1 ಚಮಚ ನೀರು ಚಿಮುಕಿಸಿ, ಹಿಟ್ಟು ಬೇಬಿ ಕಾರ್ನ್‌ಗೆ ಅಂಟಿಕೊಳ್ಳುವಂತೆ ಕಲಸಬೇಕು. ಬಳಿಕ ಇದನ್ನು ಕಾದ ಎಣ್ಣೆಯಲ್ಲಿ ಹಾಕಿ 3-4 ನಿಮಿಷ ಗರಿಗರಿಯಾಗುವರೆಗೆ ಕರಿದು ಒಂದು ತಟ್ಟೆಗೆ ಎತ್ತಿಟ್ಟುಕೊಳ್ಳಬೇಕು.

ನಂತರ ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಕಾಯಿಸಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಹಾಕಿ 1 ನಿಮಿಷ ಹುರಿದು, ನಂತರ ಹೆಚ್ಚಿದ ಈರುಳ್ಳಿ ಹಾಕಿ ಈಗ ಉರಿ ಕಡಿಮೆ ಮಾಡಿ ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಬೇಕು. ಈ ಮಿಶ್ರಣಕ್ಕೆ ಕರಿದು ಇಟ್ಟಿರುವ ಬೇಬಿ ಕಾರ್ನ್ ಹಾಕಿ ಚೆನ್ನಾಗಿ ಕೈಯಾಡಿಸಿದರೆ, ಗರಿಗರಿಯಾದ ಸಿಂಪಲ್ ಬೇಬಿ ಕಾರ್ನ್ ಮಂಚೂರಿಯನ್ ಸವಿಯಲು ಸಿದ್ಧ.

Must Read