August 9, 2026
Sunday, August 9, 2026
spot_img

ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಅಬ್ಬರ ; ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮಹಾಸಮರಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಲಂಕಾದ ಪಿಚ್‌ ಹಾಗೂ ಹವಾಮಾನಕ್ಕೆ ಭಾರತದ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಅದ್ಭುತವಾಗಿ ಹೊಂದಿಕೊಂಡಿರುವುದು ಈ ಪಂದ್ಯದ ಮೂಲಕ ಸಾಬೀತಾಗಿದೆ. ಆದರೆ, ಪಂದ್ಯದ ಅಂತಿಮ ಓವರ್‌ನಲ್ಲಿ ಬೌಲರ್ ಮೊಹಮ್ಮದ್ ಸಿರಾಜ್‌ ಆಡಿದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಡ್ರಾದತ್ತ ಸಾಗಿದ್ದ ಪಂದ್ಯಕ್ಕೆ ಟ್ವಿಸ್ಟ್:

ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತಕ್ಕೆ ಗೆಲ್ಲಲು 45 ಓವರ್‌ಗಳಲ್ಲಿ 207 ರನ್‌ಗಳ ಸವಾಲಿತ್ತು. ಆರಂಭದಲ್ಲಿ ಟೀಮ್ ಇಂಡಿಯಾ ವೇಗವಾಗಿ ರನ್ ಕಲೆಹಾಕಿದರೂ, ಮಧ್ಯದಲ್ಲಿ ರಿಷಭ್ ಪಂತ್ ಅವರ ತಾಳ್ಮೆಯ ಬ್ಯಾಟಿಂಗ್‌ನಿಂದಾಗಿ ಪಂದ್ಯ ಡ್ರಾದತ್ತ ಮುಖ ಮಾಡಿತ್ತು. ಅಂತಿಮವಾಗಿ ಭಾರತದ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 15 ರನ್‌ಗಳ ಕಠಿಣ ಸವಾಲು ಎದುರಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಮೊಹಮ್ಮದ್ ಸಿರಾಜ್ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದರು.

ಇದನ್ನೂ ಓದಿ:

ಒಂದೇ ಓವರ್‌ನಲ್ಲಿ 23 ರನ್ ಚಚ್ಚಿದ ಮಿಯಾ ಭಾಯ್:

ಕೊನೆಯ ಓವರ್‌ನ ಮೊದಲ ಮೂರು ಎಸೆತಗಳಲ್ಲೇ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಸಿರಾಜ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದು ವಾರ್ಮ್-ಅಪ್ ಪಂದ್ಯವಾಗಿದ್ದರಿಂದ ಓವರ್‌ನ ಎಲ್ಲಾ ಎಸೆತಗಳನ್ನು ಆಡಲು ಭಾರತ ನಿರ್ಧರಿಸಿತು. ನಾಲ್ಕನೇ ಎಸೆತದಲ್ಲಿ ರನ್ ಬರದಿದ್ದರೂ, ಐದನೇ ಎಸೆತವನ್ನು ಸಿರಾಜ್ ಬೌಂಡರಿಗೆ ಅಟ್ಟಿದರು. ಕೊನೆಯ ಎಸೆತದಲ್ಲಿ ಒಂದು ರನ್ ಪಡೆದರು. ಈ ಮೂಲಕ ಕೇವಲ ಆ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸೇರಿದಂತೆ ಬರೋಬ್ಬರಿ 23 ರನ್ ಲೂಟಿ ಮಾಡಿ ಭಾರತಕ್ಕೆ ರೋಮಾಂಚಕ ಗೆಲುವು ತಂದುಕೊಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !