August 10, 2026
Monday, August 10, 2026
spot_img

ಹೊಟೇಲ್‌ ಸಿಬ್ಬಂದಿ ಅಡುಗೆ ಹೇಗೆ ಮಾಡ್ತಾರೆ ಅನ್ನೋದು ಜನರಿಗೂ ಕಾಣಿಸ್ಬೇಕು! ಇನ್ಮುಂದೆ ಕಿಚನ್‌ಗೆ ಕ್ಯಾಮರಾ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂದಿನ ದಿನಗಳಲ್ಲಿ ಹೊಟೇಲ್‌ಗಳ ಅಡುಗೆ ಮನೆಯಲ್ಲಿ ಕ್ಯಾಮರಾ ಅಳವಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಈ ಕ್ಯಾಮರಾ ಮೂಲಕವಾಗಿ ಹೊರಗಡೆ ಊಟಕ್ಕಾಗಿ ಕಾಯುತ್ತಾ ಕೂರುವ ಗ್ರಾಹಕರು ತಮ್ಮ ಅಡುಗೆ ಹೇಗೆ ಸಿದ್ಧವಾಗುತ್ತಿದೆ ಎನ್ನುವುದನ್ನು ಕಣ್ಣಾರೆ ನೋಡುವಂತೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಹೊಟೇಲ್‌ಗಳಲ್ಲಿ ನಾವು ತಿನ್ನುವ ಆಹಾರ ಹೇಗಿದೆ? ಸ್ವಚ್ಛತೆಯಿಂದ ಅಡುಗೆ ಮಾಡ್ತಿದ್ದಾರಾ? ಸೇರಿದಂತೆ ಇತರೆ ವಿಷಯಗಳನ್ನು ಗ್ರಾಹಕರು ಅರಿಯಬೇಕು. ಇದಕ್ಕಾಗಿ ಕ್ಯಾಮರಾದಲ್ಲಿ ಅಡುಗೆ ಮಾಡುವ ಕಾರ್ಯ ಕ್ಯಾಪ್ಚರ್‌ ಆಗಬೇಕು ಹಾಗೇ ಲೈವ್‌ನ್ನು ಗ್ರಾಹಕರು ನೋಡುವಂತಾಗಬೇಕು. ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಮತ್ತಷ್ಟು ಕಾನೂನು ಮತ್ತು ಮಾರ್ಗಸೂಚಿಗಳನ್ನು ತರಲಾಗುವುದು ಎಂದು ತಿಳಿಸಿದ್ದಾರೆ.

ದುಡ್ಡಿಗೆ ತಕ್ಕಂತಹ ಊಟ ಕೊಡೋದು ಹೊಟೇಲ್‌ ಜವಾಬ್ದಾರಿ

ಹೊಟೇಲ್‌ಗೆ ಬರುವ ಗ್ರಾಹಕರು ದುಬಾರಿ ಮೊತ್ತ ಕೊಟ್ಟು ರುಚಿ ಹಾಗೂ ಶುಚಿಯಾದ ಆಹಾರವನ್ನು ಬಯಸುತ್ತಾರೆ. ಆದರೆ ಆಹಾರದ ಗುಣಮಟ್ಟದಲ್ಲಿ ಲೋಪ ಬಂದರೆ ಅಂತಹ ಹೊಟೇಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವರದಿ ಬಂದ ನಂತರ ಕಠಿಣ ಕ್ರಮ

ಈಗಾಗಲೇ ನಗರದ ಹಲವು ಹೊಟೇಲ್‌ಗಳಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಅಡುಗೆ ಮನೆಗೆ ಬೀಗ ಹಾಕಿಸಿದ್ದೇವೆ.ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಲ್ಯಾಬ್‌ನಿಂದ ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ನಿಯಮ ಉಲ್ಲಂಘನೆ ಮಾಡುವ ಹೊಟೇಲ್‌ಗಳ ವಿರುದ್ಧ ಮೊದಲು ನೊಟೀಸ್‌ ನೀಡುತ್ತೇವೆ. ಆನಂತರವೂ ನಿಯಮ ಉಲ್ಲಂಘನೆ ಮಾಡಿದರೆ ಮುಲಾಜಿಲ್ಲದೆ ಹೊಟೇಲ್‌ಗೆ ಬೀಗ ಹಾಕಿಸುತ್ತೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !