August 11, 2026
Tuesday, August 11, 2026
spot_img

SNACKS | ಮಕ್ಕಳು ತರಕಾರಿ ತಿನ್ನದಿದ್ದರೆ ಸಂಜೆ ಸ್ನ್ಯಾಕ್ಸ್‌ಗೆ ಈ ಹೆಲ್ದೀ ವೆಜ್ ಪಕೋಡಾ ಮಾಡಿಕೋಡಿ

ಮಕ್ಕಳು ತರಕಾರಿ ತಿನ್ನಲು ಹಠ ಮಾಡುತ್ತಿದ್ದಾರಾ? ಹಾಗಿದ್ದರೆ ಸಂಜೆ ಚಹಾ ಅಥವಾ ಹಾಲಿನ ಜತೆ ಸವಿಯಲು, ಗರಿಗರಿಯಾದ ಈ ಹೆಲ್ದೀ ವೆಜ್ ಪಕೋಡಾವನ್ನು ಮಾಡಿಕೊಡಿ. ಇದನ್ನು ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು

ಈರುಳ್ಳಿ

ಕ್ಯಾರೆಟ್

ಎಲೆಕೋಸು

ಕ್ಯಾಪ್ಸಿಕಂ

ಹಸಿ ಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಅಜ್ವೈನ ಮತ್ತು ಅರಿಶಿನ ಪುಡಿ

ಖಾರದ ಪುಡಿ ಮತ್ತು ಗರಂ ಮಸಾಲಾ

ಎಣ್ಣೆ ಮತ್ತು ಅಡುಗೆ ಸೋಡಾ

ಉಪ್ಪು

ಮಾಡುವ ವಿಧಾನ

ಮೊದಲುಒಂದು ದೊಡ್ಡ ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಎಲೆಕೋಸು, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಇದಕ್ಕೆ ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಗರಂ ಮಸಾಲಾ ಮತ್ತು ಅಜ್ವೈನವನ್ನು ಸೇರಿಸಿ. ಕೈಯಿಂದ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ತರಕಾರಿಗಳಲ್ಲಿರುವ ನೀರು ಬಿಟ್ಟುಕೊಳ್ಳಲು ಇದನ್ನು 5 ನಿಮಿಷ ಪಕ್ಕಕ್ಕೆ ಇಡಬೇಕು. ಈಗ ಅದೇ ತರಕಾರಿ ಮಿಶ್ರಣಕ್ಕೆ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ. 1 ಚಿಟಿಕೆ ಅಡುಗೆ ಸೋಡಾ ಮತ್ತು 1 ದೊಡ್ಡ ಚಮಚ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ, ಈಗ ತರಕಾರಿಯಲ್ಲಿರುವ ನೀರಿನಂಶ ನೋಡಿಕೊಂಡು, ಅಗತ್ಯವಿದ್ದರೆ ಮಾತ್ರ ಕೇವಲ 2 ರಿಂದ 3 ಚಮಚ ನೀರನ್ನು ಚಿಮುಕಿಸಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಿ. ಕರಿಯಲು ಬೇಕಾದಷ್ಟು ಎಣ್ಣೆಯನ್ನು ಚೆನ್ನಾಗಿ ಕಾಯಿಸಿ. ಕಲಸಿದ ಮಿಶ್ರಣದಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದುಕೊಂಡು, ಎಣ್ಣೆಗೆ ಬಿಡಬೇಕು. ಎರಡು ಕಡೆ ಹೊಂಬಣ್ಣ ಮತ್ತು ಗರಿಗರಿಯಾಗುವವರೆಗೆ ತಿರುಗಿಸಿ ಹಾಕುತ್ತಾ ಚೆನ್ನಾಗಿ ಕರಿದರೆ, ಬಿಸಿಬಿಸಿಯಾದ ಕ್ರಿಸ್ಪಿ ತರಕಾರಿ ಪಕೋಡಾ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !