August 12, 2026
Wednesday, August 12, 2026
spot_img

ರಾಜ್ಯದಲ್ಲಿ ಉತ್ತಮಗೊಂಡ ಗಾಳಿಯ ಗುಣಮಟ್ಟ: ಮಡಿಕೇರಿಗೆ ಮೊದಲ ಸ್ಥಾನ, ಬೆಂಗಳೂರಿನಲ್ಲೂ ಶುದ್ಧ ಗಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಅತ್ಯುತ್ತಮ ಹಂತ ತಲುಪಿದೆ. ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದ್ದು ಸಾರ್ವಜನಿಕರು ನಿರಾಳವಾಗಿ ನಿಟ್ಟುಸಿರು ಬಿಡುವಂತಾಗಿದೆ.

ಮೊದಲ ಸ್ಥಾನದಲ್ಲಿ ಕೊಡಗಿನ ಮಡಿಕೇರಿ:

ರಾಜ್ಯದಲ್ಲೇ ಅತ್ಯಂತ ಶುದ್ಧ ಮತ್ತು ಆರೋಗ್ಯಕರ ಗಾಳಿ ಹೊಂದಿರುವ ನಗರವಾಗಿ ಕೊಡಗು ಜಿಲ್ಲೆಯ ಮಡಿಕೇರಿ ಹೊರಹೊಮ್ಮಿದೆ. ಮಡಿಕೇರಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಕೇವಲ 16 ದಾಖಲಾಗುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.

ರಾಜಧಾನಿ ಬೆಂಗಳೂರಿನಲ್ಲೂ ಶುದ್ಧ ಗಾಳಿ:

ಸಾಮಾನ್ಯವಾಗಿ ವಾಹನ ದಟ್ಟಣೆ ಮತ್ತು ಮಾಲಿನ್ಯದಿಂದ ಕೂಡಿರುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ. ಬೆಂಗಳೂರಿನಲ್ಲಿ ಇಂದು AQI 29 ದಾಖಲಾಗಿದೆ. ಇದು ಉತ್ತಮ ಮತ್ತು ಆರೋಗ್ಯಕರ ಸ್ಥಿತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ:

ಇತರ ನಗರಗಳ ಸ್ಥಿತಿ:

ರಾಜ್ಯದ ಇನ್ನುಳಿದ ಪ್ರಮುಖ ನಗರಗಳಲ್ಲೂ ಮಾಲಿನ್ಯದ ಪ್ರಮಾಣ ತಗ್ಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪ್ರಕಾರ ಎಲ್ಲಾ ನಗರಗಳಲ್ಲೂ ವಾಯು ಗುಣಮಟ್ಟದ ಸೂಚ್ಯಂಕವು ಸುರಕ್ಷಿತ ಮಿತಿಯಲ್ಲಿದೆ. ಮಳೆಯ ವಾತಾವರಣದ ಹಿನ್ನೆಲೆಯಲ್ಲಿ ಧೂಳಿನ ಪ್ರಮಾಣ ಕಡಿಮೆಯಾಗಿರುವುದು ಗಾಳಿಯ ಶುದ್ಧತೆಗೆ ಪ್ರಮುಖ ಕಾರಣ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !