August 12, 2026
Wednesday, August 12, 2026
spot_img

ಹೆಣ್ಮಕ್ಕಳಿಗೆ ಅಂದ ಇದ್ರೆ ಚಂದ, ಗಂಡಸರಿಗೆ ಗೌರವ ಇದ್ರೆ ಚಂದ್‌: ಯಶ್‌ ಅವತಾರ ಇಷ್ಟವಾಗಿಲ್ಲ ಎಂದ ಕನ್ನಡದ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಯಶ್‌ ಅವರು ಟಾಕ್ಸಿಕ್‌ ಸಿನಿಮಾಗಾಗಿ ಬೋಲ್ಡ್‌ ಅವತಾರವನ್ನು ತಾಳಿದ್ದಾರೆ. ಸಿನಿಮಾ ಟ್ರೇಲರ್‌ನಲ್ಲಿ ಬರುವ ಸೀನ್‌ ಒಂದರಲ್ಲಿ ಯಶ್‌ ನ್ಯೂಡ್‌ ಆಗಿ ಕಾಣಿಸಿದ್ದಾರೆ. ಈ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ.

ಈ ಬಗ್ಗೆ ಕನ್ನಡದ ನಟಿ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಪುತ್ರಿ ರಿಷಿಕಾ ಸಿಂಗ್‌ ಟ್ವೀಟ್‌ ಮಾಡಿದ್ದು, ಯಶ್‌ ಹೊಸ ಅವತಾರ ಕನ್ನಡಿಗರಿಗೆ ಇಷ್ಟವಾಗಿಲ್ಲ ಎಂದಿದ್ದಾರೆ. ಹೆಣ್ಣುಮಕ್ಕಳಿಗೆ ಅಂದ ಇದ್ದರೆ ಚಂದ ಆದರೆ ಗಂಡು ಮಕ್ಕಳಿಗೆ ಮರ್ಯಾದೆ ಇದ್ದರೆ ಚಂದ. ಪ್ಯಾಂಟು ಬಿಚ್ಕೊಂಡು ಮಂಗನ ರೀತಿ ಆಡಿದ್ದೀರಿ. ಮನೆಯಲ್ಲಿ ಅಂದದ ಹೆಂಡತಿ ಇರುವಾಗ ಹೀರೋಯಿನ್‌ಗಳ ಜೊತೆ ಚಕ್ಕಂದ ಆಡಿದ್ದೀರಿ. ನಿಮ್ಮ ಈ ಹೊಸ ಅವತಾರ ಇಷ್ಟವಾಗಿಲ್ಲ. ನಿಮಗು ಕೂಡ ಹೆಣ್ಣುಮಗು ಇದೆ. ಅವಳಿಗೆ ಸಿನಿಮಾ ತೋರಿಸ್ತೀರಾ? ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್‌ ನೀಡಬೇಕು. ಇಲ್ಲವಾದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ, ಐ ಆಮ್‌ ಟಾಕ್ಸಿಕ್‌ ಎಂದು ನಟಿ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ.

ಕನ್ನಡದ ಹೀರೋಯಿನ್‌ಗಳು ಇತರ ಭಾಷೆಯ ಸಿನಿಮಾಗಳಲ್ಲಿ ಕಿಸ್ಸಿಂಗ್‌ ಸೀನ್‌ ಮಾಡಿದರೆ ಎಲ್ಲರಿಗೂ ತೊಂದರೆ ಆದರೆ ಯಶ್‌ ಈ ರೀತಿ ಪ್ಯಾಂಟ್‌ ತೆಗೆದರೆ ಯಾರೂ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಇತ್ತ ಕೆಲವರು ರಿಷಿಕಾ ಮಾತಿನಲ್ಲಿ ತೂಕ ಇದೆ ಎಂದರೆ ಹಲವರು ನಮ್ಮ ಕನ್ನಡದ ಸಿನಿಮಾ ನೆಕ್ಸ್ಟ್‌ ಲೆವೆಲ್‌ಗೆ ಹೋಗುವಾಗ ತಕರಾರು ಬೇಡ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !