ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ದಿನಗಳಿಂದ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕದ ನೂತನ ಸಚಿವರ ಖಾತೆ ಹಂಚಿಕೆ ಕೊನೆಗೂ ಅಂತಿಮಗೊಂಡಿದೆ. 19 ನೂತನ ಸಚಿವರಿಗೆ ವಿವಿಧ ಪ್ರಮುಖ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಇದೇ ವೇಳೆ ಕೆಲವು ಹಿರಿಯ ಸಚಿವರ ಖಾತೆಗಳಲ್ಲೂ ಬದಲಾವಣೆ ಮಾಡಲಾಗಿದೆ.
ಯಾರಿಗೆ ಯಾವ ಖಾತೆ?
ಜಮೀರ್ ಅಹ್ಮದ್ ಖಾನ್ – ವಸತಿ
ಎನ್. ಚಲುವರಾಯಸ್ವಾಮಿ – ಜಲಸಂಪನ್ಮೂಲ
ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ
ಬಿ. ನಾಗೇಂದ್ರ – ಯೋಜನೆ ಮತ್ತು ಸಾಂಖ್ಯಿಕ
ಲಕ್ಷ್ಮಣ ಸವದಿ – ಸಹಕಾರ
ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಕೆ.ಎಸ್. ಬಸವಂತಪ್ಪ – ಮುಜರಾಯಿ, ಮೀನುಗಾರಿಕೆ
ರಾಮಲಿಂಗಾರೆಡ್ಡಿ – ಅರಣ್ಯ
ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ
ಯು.ಟಿ. ಖಾದರ್ – ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಟಿ. ರಘುಮೂರ್ತಿ – ಪರಿಶಿಷ್ಟ ಪಂಗಡ ಕಲ್ಯಾಣ
ಸಂತೋಷ್ ಲಾಡ್ – ಕಾರ್ಮಿಕ
ಸಿ. ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಮತ್ತು ರೇಷ್ಮೆ
ರುದ್ರಪ್ಪ ಲಮಾಣಿ – ಸಕ್ಕರೆ ಮತ್ತು ಜವಳಿ
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಅಜಯ್ ಸಿಂಗ್ – ಸಣ್ಣ ನೀರಾವರಿ, ಐಟಿ-ಬಿಟಿ
ಎಚ್.ಸಿ. ಬಾಲಕೃಷ್ಣ – ಪೌರಾಡಳಿತ
ಕೆ.ಎಚ್. ಮುನಿಯಪ್ಪ – ಸಮಾಜ ಕಲ್ಯಾಣ
ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಪೂರೈಕೆ
ಶಿವಲಿಂಗೇಗೌಡ – ಅಬಕಾರಿ
ಎಸ್.ಎಸ್. ಮಲ್ಲಿಕಾರ್ಜುನ್ – ಗಣಿ ಮತ್ತು ಭೂವಿಜ್ಞಾನ
ಕೆಲ ಸಚಿವರಿಗೆ ಹಿಂದಿನ ಖಾತೆಗಳೇ
ಸಂತೋಷ್ ಲಾಡ್, ಜಮೀರ್ ಅಹ್ಮದ್ ಖಾನ್, ಶಿವರಾಜ್ ತಂಗಡಗಿ, ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಧು ಬಂಗಾರಪ್ಪ ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಪ್ರಮುಖ ಇಲಾಖೆಗಳನ್ನೇ ಮತ್ತೆ ನೀಡಲಾಗಿದೆ.
ಮೊದಲ ಹಂತದ ಸಚಿವರ ಖಾತೆಗಳಲ್ಲೂ ಸ್ಪಷ್ಟತೆ
ಮೊದಲ ಹಂತದಲ್ಲಿ ಸಚಿವರಾಗಿದ್ದವರ ಪೈಕಿ ಡಿ.ಕೆ. ಶಿವಕುಮಾರ್ ಹಣಕಾಸು, ಡಿಪಿಎಆರ್, ಗುಪ್ತಚರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಜವಾಬ್ದಾರಿ ಹೊಂದಿದ್ದಾರೆ. ಡಾ. ಜಿ. ಪರಮೇಶ್ವರ್ ಅವರಿಗೆ ಕಂದಾಯ, ಯುವ ಸಬಲೀಕರಣ ಮತ್ತು ಕ್ರೀಡೆ, ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ, ಕೆ.ಜೆ. ಜಾರ್ಜ್ ಅವರಿಗೆ ಇಂಧನ ಮತ್ತು ಪ್ರವಾಸೋದ್ಯಮ, ಎಂ.ಬಿ. ಪಾಟೀಲ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸತೀಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಇಲಾಖೆ ನೀಡಲಾಗಿದೆ.
ಇದರೊಂದಿಗೆ ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ಧಿ, ಭೈರತಿ ಸುರೇಶ್ – ಸಾರಿಗೆ, ಡಾ. ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ, ಡಾ. ಶರಣಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ ಹಾಗೂ ಈಶ್ವರ ಖಂಡ್ರೆ – ಗ್ರಾಮೀಣಾಭಿವೃದ್ಧಿ ಇಲಾಖೆಗಳ ಜವಾಬ್ದಾರಿ ಮುಂದುವರಿದಿದೆ.



