ಮೇಷ
ಹಳೆಯ ಚಿಂತೆ ಅಥವಾ ಸಮಸ್ಯೆ ಮರುಕಳಿಸಬಹುದು. ಇತರರ ಹವ್ಯಾಸಗಳಿಗೆ ಒಗ್ಗಿಕೊಳ್ಳಿ. ಅವರನ್ನು ಬದಲಿಸಲು ಅಸಾಧ್ಯ.
ವೃಷಭ
ವೃತ್ತಿಯಲ್ಲಿ ಮೂಡುವ ಸಮಸ್ಯೆ ಪರಿಹರಿಸಲೇ ಈ ದಿನ ವ್ಯಯವಾಗಲಿದೆ. ಕುಟುಂಬದ ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ.
ಮಿಥುನ
ಅಹಿತಕರ ಪರಿಸ್ಥಿತಿ ಎದುರಿಸುವಿರಿ. ಗಟ್ಟಿ ಮನಸ್ಸು ಅವಶ್ಯ. ಭಾವುಕರಾಗಿ ದುರ್ಬಲ ರಾಗಬೇಡಿ. ಆರ್ಥಿಕ ಪರಿಸ್ಥಿತಿ ಸ್ಥಿರವಿರಲಿದೆ.
ಕಟಕ
ವೃತ್ತಿಕ್ಷೇತ್ರದಲ್ಲಿ ನಿಮ್ಮ ಅಽಪತ್ಯ ಸಾಽಸಲು ಯತ್ನಿಸುವಿರಿ. ಕೆಲವರ ವಿರೋಧ ಉಂಟಾದೀತು. ಮನೆಯಲ್ಲಿ ಸೌಹಾರ್ದ ವಾತಾವರಣ.
ಸಿಂಹ
ದೈಹಿಕ ಆರೋಗ್ಯದ ಜತೆಗೇ ಮಾನಸಿಕ ಸ್ವಾಸ್ಥ್ಯಕ್ಕೂ ಗಮನ ಕೊಡಿ. ಸಣ್ಣ ವಿಷಯಗಳಿಗೆ ಅತಿಯಾಗಿ ಚಿಂತಿಸಲು ಹೋಗದಿರಿ.
ಕನ್ಯಾ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಅಸ್ತವ್ಯಸ್ತವಾದೀತು. ಆದಾಯ- ಖರ್ಚಿನ ಮಧ್ಯೆ ಸಮತೋಲನ ಸಾಽಸಿರಿ.
ತುಲಾ
ನಿಮ್ಮನ್ನು ನೀವೇ ಏಕಾಂಗಿಯಾಗಿಸಿ ಕೊಳ್ಳಬೇಡಿ. ಅನ್ಯರ ಜತೆ ಬೆರೆಯಿರಿ. ಭಾವನೆ ಹಂಚಿಕೊಳ್ಳಿ. ಸಕಾಲದಲ್ಲಿ ಆಹಾರ ಸೇವನೆ ಮುಖ್ಯ.
ವೃಶ್ಚಿಕ
ಎಲ್ಲರನ್ನು ಕುರುಡಾಗಿ ನಂಬಬೇಡಿ. ಬೆನ್ನ ಹಿಂದೆ ಚೂರಿ ಹಾಕಿಯಾರು. ಕಠಿಣ ಕಾರ್ಯಕ್ಕೆ ಮುನ್ನ ದೇಹಕ್ಕೆ ವಿಶ್ರಾಂತಿ ಕೊಡಿ. ಆರ್ಥಿಕ ಒತ್ತಡ.
ಧನು
ಅಡೆತಡೆಗಳಿಗೆ ಅಂಜಬೇಡಿ. ಅದನ್ನೆ ಯಶಸ್ಸಿನ ಮೆಟ್ಟಿಲಾಗಿಸಿ. ಕಂಡದ್ದೆಲ್ಲ ಖರೀದಿಸುವ ಹುಮ್ಮಸ್ಸು ಬಿಡಿ, ವೆಚ್ಚವನ್ನು ನಿಯಂತ್ರಿಸಿ.
ಮಕರ
ಕೆಲಸದ ಒತ್ತಡದ ಮಧ್ಯೆಯೂ ಕುಟುಂಬದ ಹಿತಾಸಕ್ತಿ ಮರೆಯಬೇಡಿ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ದೈಹಿಕ ಜಡತ್ವ ಕಾಡಲಿದೆ.
ಕುಂಭ
ನಿಮಗೆ ಆಗದ ವಿಷಯದಲ್ಲಿ ರಾಜಿ ಮಾಡದಿರಿ. ಅದರಿಂದ ಸಮಸ್ಯೆ ಎದುರಿಸುವಿರಿ. ಅನುಚಿತ ಕಾರ್ಯದಿಂದ ಕೆಟ್ಟ ಹೆಸರು ಬಂದೀತು.
ಮೀನ
ಉದ್ದೇಶ ಸಾಧನೆಗೆ ಕಠಿಣ ದುಡಿಮೆ ಅಗತ್ಯ. ಸಂಗಾತಿ ಜತೆ ಸೌಹಾರ್ದ ಸಂಬಂಧ. ಭಿನ್ನಮತ ನಿವಾರಣೆ. ಆದಾಯ, ಖರ್ಚು ಎರಡೂ ಹೆಚ್ಚು.



