August 13, 2026
Thursday, August 13, 2026
spot_img

ಶ್ರಾವಣ ಎಲ್ಲಾ ಮಾಡೋದಿಲ್ಲ ಚಿಕನ್‌ ಬೇಕೇ ಬೇಕು ಅನ್ನೋರು ಸಿಂಪಲ್‌ ಒನ್‌ ಪಾಟ್‌ ಪೆಪ್ಪರ್‌ ಚಿಕನ್‌ ರೈಸ್‌ ಟ್ರೈ ಮಾಡಿ

ಶ್ರಾವಣದಲ್ಲಿ ನಾನ್‌ವೆಜ್‌ ತಿನ್ನುವವರ ಸಂಖ್ಯೆ ಕಡಿಮೆ. ಆದರೆ ಪ್ರೋಟೀನ್‌, ಆರೋಗ್ಯ ಇನ್ನಿತರ ಕಾರಣಗಳಿಂದ ಕೆಲವರು ಚಿಕನ್‌, ಮೊಟ್ಟೆ ಸೇವನೆಯನ್ನು ಮಾಡುತ್ತಾರೆ. ಸಿಂಪಲ್‌ ರೈಸ್‌ನಿಂದ ಹೆಚ್ಚು ಪ್ರೋಟೀನ್‌ ಬೇಕು ಅನ್ನೋದಾದ್ರೆ ಈ ಪೆಪ್ಪರ್‌ ರೈಸ್‌ ಟ್ರೈ ಮಾಡಿ. ಚಿಕನ್‌ ಬ್ರೆಸ್ಟ್‌ನ್ನು ಈ ರೈಸ್‌ಗೆ ಬಳಸಬಹುದು. ರುಚಿ ಅದ್ಭುತವಾಗಿರುತ್ತದೆ. ಬನ್ನಿ ಹಾಗಿದ್ರೆ ರೆಸಿಪಿ ಏನು ನೋಡೋಣ..


ಸಾಮಾಗ್ರಿಗಳು: ಎಣ್ಣೆ, ತುಪ್ಪ, ಚಕ್ಕೆ, ಲವಂಗ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕೊತ್ತಂಬರಿ ಸೊಪ್ಪು, ಪುದೀನಾ, ಚಿಕನ್‌, ಪೆಪ್ಪರ್‌, ಬಿರಿಯಾನಿ ಪುಡಿ, ನಿಂಬೆಹುಳಿ

ಮಾಡುವ ವಿಧಾನ
ಮೊದಲು ಚಿಕನ್‌ ಬ್ರೆಸ್ಟ್‌ ಅಥವಾ ಮಾಮೂಲಿ ಚಿಕನ್‌ಗೆ ಉಪ್ಪು ಹಾಗೂ ನಿಂಬು ಹಾಕಿ ಮ್ಯಾರಿನೇಟ್‌ ಮಾಡಿ ಇಡಿ.

ಆನಂತರ ಪ್ಯಾನ್‌ಗೆ ಎಣ್ಣೆ ತುಪ್ಪ, ಚಕ್ಕೆ, ಲವಂಗ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ನಂತರ ಈರುಳ್ಳಿ ಹಾಕಿ ಬಾಡಿಸಿ, ಜೊತೆಗೆ ಪುದೀನ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಬಾಡಿಸಿ

ನಂತರ ಚಿಕನ್‌ ಹಾಕಿ ಬೇಯಿಸಿ, ಐದು ನಿಮಿಷದ ನಂತರ ಉಪ್ಪು, ಪೆಪ್ಪರ್‌ ಹಾಗೂ ಬಿರಿಯಾನಿ ಪೌಡರ್‌ ಹಾಕಿ

ಚಿಕನ್‌ ಸಂಪೂರ್ಣ ಬೆಂದ ನಂತರ ಅಕ್ಕಿ ಹಾಕಿ ಅಳತೆಗೆ ತಕ್ಕಂತೆ ನೀರು ಹಾಕಿ ಬೇಯಿಸಿದ್ರೆ ಒನ್‌ ಪಾಟ್‌ ಚಿಕನ್‌ ಪೆಪ್ಪರ್‌ ರೈಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !