August 13, 2026
Thursday, August 13, 2026
spot_img

ಬಿಗ್‌ಬಾಸ್‌ನ ಮೊದಲ ಎರಡು ಕಂಟೆಸ್ಟೆಂಟ್ಸ್‌ ರಿವೀಲ್‌, ಒಬ್ರು ಅಜ್ಜಿ ಮತ್ತೊಬ್ರು GenZ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಸೀಸನ್-13 ಫೀವರ್‌ ಆರಂಭವಾಗಿದ್ದು, ಅಗ್ನಿಪರೀಕ್ಷೆ ಎಂಬ ವಿಶೇಷ ಸ್ಪರ್ಧೆಯನ್ನು ದಾಟಿ ಇಬ್ಬರು ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ.

ಸಾಮಾನ್ಯ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆಯೇ ಅಗ್ನಿಪರೀಕ್ಷೆ. ಈ ಪ್ರಕ್ರಿಯೆಗೂ ಮುನ್ನ ಲಕ್ಷಾಂತರ ಮಂದಿ ಆಡಿಷನ್‌ನಲ್ಲಿ ಭಾಗವಹಿಸಿದ್ದು, ಅವರಲ್ಲಿ 60 ಮಂದಿಯನ್ನ ಶಾರ್ಟ್‌ಲಿಸ್ಟ್‌ ಮಾಡಿ, ಮುಂದಿನ ಹಂತದ ʻಅಗ್ನಿಪರೀಕ್ಷೆʼಗೆ ಆಯ್ಕೆ ಮಾಡಲಾಗಿದೆ. ವಿಭಿನ್ನ ವ್ಯಕ್ತಿತ್ವ ಹಾಗೂ ಇಂಟ್ರೆಸ್ಟಿಂಗ್‌ ಕ್ಯಾರೆಕ್ಟರ್‌ ಇರುವ ಸ್ಪರ್ಧಿಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಈ ವಿಶೇಷ ಆಯ್ಕೆಯಲ್ಲಿ ಒಬ್ಬರು ಅಜ್ಜಿ ಹಾಗೂ ಮತ್ತೊಬ್ಬರು GenZಯನ್ನು ಆಯ್ಕೆ ಮಾಡಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯ 72 ವರ್ಷದ ರತ್ನಾ ಹಾಗೂ 20 ವರ್ಷದ ಕುಮಾರಿ ಬಿಗ್‌ಬಾಸ್‌ನ ಸ್ಟಾರ್ ಕಂಟೆಸ್ಟಂಟ್‌ಗಳಾಗಿ ಆಯ್ಕೆಯಾಗಿದ್ದಾರೆ. ಅಗ್ನಿಪರೀಕ್ಷೆಯ ಜಡ್ಜ್‌ ವಿನಯ್‌ ಗೌಡ ರತ್ನ ಅವರನ್ನು ಆರಿಸಿದ್ದು, ಇವರ ಉತ್ಸಾಹ ಅದ್ಭುತವಾಗಿದೆ ಎಂದಿದ್ದಾರೆ ಜೊತೆಗೆ ಅವರಿಗೆ ಬಂಗಾರಪೇಟೆ ಆನೆ ಎನ್ನುವ ಬಿರುದನ್ನೂ ನೀಡಿದ್ದಾರೆ.

ಬಿಗ್‌ಬಾಸ್ ಈ ಸೀಸನ್‌ಗೆ ಕಾಮನ್ ಮ್ಯಾನ್ ಲಿಸ್ಟ್‌ನಲ್ಲಿ ಆಯ್ಕೆಯಾದ ಇನ್ನೋರ್ವ ಸ್ಪರ್ಧಿ 20 ವರ್ಷದ ಕುಮಾರಿ. ಹಳ್ಳಿ ಪ್ರತಿಭೆ ಕುಮಾರಿಯವರ ಮುಗ್ಧತೆ ಮತ್ತು ಸಹಜ ವ್ಯಕ್ತಿತ್ವವೇ ಅವರ ವಿಶೇಷತೆಯಾಗಿ ಗುರುತಿಸಲ್ಪಟ್ಟಿದೆ. ಹೀಗಾಗಿ ಬಿಗ್‌ಬಾಸ್‌ಗೆ ಆಯ್ಕೆಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !