August 14, 2026
Friday, August 14, 2026
spot_img

ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಉರುಳಿಗೆ ಕೊರಳೊಡ್ಡಿದ್ಯಾಕೆ? ಆ ಫೋನ್‌ ಕಾಲ್‌ನಲ್ಲಿ ಅಂಥದ್ದೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸನದ ಹುಡುಗಿಯನ್ನು ಕೇರಳದ ಹುಡುಗನನ್ನೂ ಕಟ್ಟು ಹಾಕಿದ್ದು ಸುಂದರ ಪ್ರೀತಿ, ಒಂದೇ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ ಸಿಬ್ಬಂದಿ ನಡುವೆ ಎಷ್ಟು ಬೇಗ ಪ್ರೀತಿ ಮೂಡಿತ್ತೋ ಅಷ್ಟೇ ಬೇಗ ವಿರಸವೂ ಮೂಡಿತ್ತು!

ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಎಸ್‌ಬಿಐ ಬ್ಯಾಂಕ್‌ನ ಉದ್ಯೋಗಿಗಳಿಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಹಾಗೂ ಕೇರಳದಲ್ಲಿ ನಡೆದಿದೆ. ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಬೇಕಿದ್ದ ಜೋಡಿ ಹೀಗ್ಯಾಕೆ ಮಾಡಿಕೊಂಡರು ಎಂದು ಪೋಷಕರು ಕಂಗಾಲಾಗಿದ್ದಾರೆ.

ಹೇಗೆ ಪರಿಚಯವಾಗಿತ್ತು?

ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಅನುಶ್ರೀ ಹಾಗೂ ಕೇರಳದ ಇರಿಟ್ಟಿ ಮೂಲದ ಅಮಲ್‌ ಮೃತರು. ಇವರಿಬ್ಬರೂ ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವೇ ದಿನದ ಇವರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸ್ನೇಹ ಪ್ರೀತಿಯಾಗಲು ಹೆಚ್ಚು ದಿನ ಬೇಕಾಗಿರಲಿಲ್ಲ. ಮನೆಯವರ ಬಳಿ ಮಾತನಾಡಿ ಮದುವೆಯ ಪ್ರಸ್ತಾಪವಿಟ್ಟ ಜೋಡಿ ಸುಲಭವಾಗಿ ಗ್ರೀನ್‌ ಸಿಗ್ನಲ್‌ ಸಿಕ್ಕಿತ್ತು.

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಅನುಶ್ರೀ ಹಾಗೂ ಅಮಲ್‌ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು. ಮದುವೆಯ ದಿನಾಂಕ ಕೂಡ ಫಿಕ್ಸ್‌ ಆಗಿತ್ತು. ಅಮಲ್‌ ಕೇರಳದ ತಮ್ಮೂರಿಗೆ ತೆರಳಿದ್ದರು. ಈ ವೇಳೆ ಅನು ಹಾಗೂ ಅಮಲ್‌ ನಡುವೆ ಫೋನ್‌ನಲ್ಲಿ ಮಾತುಕತೆ ನಡೆದಿದೆ. ಜಗಳ ದೊಡ್ಡದಾಗಿ ಇಬ್ಬರ ಮನಸ್ಸಿಗೂ ಅತೀವ ನೋವಾಗಿತ್ತು. ಜಗಳದಿಂದ ಬೇಸತ್ತು ಅನುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಪೋಷಕರ ಜೊತೆ ಏನೂ ಆಗೇ ಇಲ್ಲ, ಎಲ್ಲವೂ ಮಾಮೂಲಿ ಎನ್ನುವಂತೆಯೇ ಅನು ಮಾತನಾಡಿದ್ದರು.

ಅನುಶ್ರೀ ಸಾವಿನ ಸುದ್ದಿ ಕೇಳಿ ಬೆಚ್ಚಿ ಬಿದ್ದ ಅಮಲ್‌

ಅನುಶ್ರೀ ಹಾಗೂ ಅಮಲ್‌ ನಡುವಿನ ಜಗಳ ಈ ಹಂತಕ್ಕೆ ತಲುಪುತ್ತದೆ ಎಂದು ಅಮಲ್‌ ಯೋಚಿಸಿರಲಿಲ್ಲ. ಅನುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವ ವಿಚಾರ ಆತನ ಕಿವಿಗೆ ಬಿದ್ದ ತಕ್ಷಣ ಅಲ್ಲೇ ಕುಸಿದುಬಿದ್ದಿದ್ದಾನೆ. ಕೆಲ ಸಮಯದ ನಂತರ ಕೇರಳದ ಇರಿಟ್ಟಿ ನಗರದ ಲಾಡ್ಜ್‌ನಲ್ಲಿ ರೂಮ್‌ ಬಾಡಿಗೆಗೆ ತೆಗೆದುಕೊಂಡು ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !