October 12, 2026
Monday, October 12, 2026
spot_img

ಆ.16ಕ್ಕೆ ಕೊಡಗಿಗೆ ಡಿಕೆ ಶಿವಕುಮಾರ್ ಭೇಟಿ: ಭಾಗಮಂಡಲದಲ್ಲಿ ವಿಶೇಷ ಪೂಜೆ, ನಲಪಾಡ್ ಮದುವೆಯಲ್ಲಿ ಭಾಗಿ

ಹೊಸದಿಗಂತ ವರದಿ ಮಡಿಕೇರಿ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ.16ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಕೊಡಗಿಗೆ ಆಗಮಿಸಲಿರುವ ಡಿಕೆಶಿ ಅವರು, ಅಂದು ಪೂರ್ವಾಹ್ನ 10.30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ಹೆಲಿಕಾಪ್ಟರ್ ಮೂಲಕ 11.45ಕ್ಕೆ ಭಾಗಮಂಡಲದ ಕಾವೇರಿ ಕಾಲೇಜು ಮೈದಾನದ ಹೆಲಿಪ್ಯಾಡ್’ಗೆ ಬಂದಿಳಿಯಲಿದ್ದಾರೆ.

ಅಲ್ಲಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿರುವ ಅವರು, 12.45 ಹೆಲಿಕಾಪ್ಟರ್ ಮೂಲಕ ಮಡಿಕೇರಿಯ ಗಾಲ್ಫ್ ಗ್ರೌಂಡ್’ನ ಹೆಲಿಪ್ಯಾಡ್’ಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ವೀರಾಜಪೇಟೆ ರಸ್ತೆಯ ಮೇಕೇರಿಯಲ್ಲಿರುವ ರೆಸಾರ್ಟ್‌ ಒಂದರಲ್ಲಿ ನಡೆಯಲಿರುವ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಅಪರಾಹ್ನ 3.20ಕ್ಕೆ ಹೆಲಿಕಾಪ್ಟರ್ ಮೂಲಕ ಅವರು ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.

Must Read