August 14, 2026
Friday, August 14, 2026
spot_img

ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಬೂಸ್ಟ್: ಮೆಗಾ ಅಪಾರಲ್ ಪಾರ್ಕ್ ಸ್ಥಾಪನೆಗೆ ಸಚಿವ ಬಿ. ನಾಗೇಂದ್ರ ಮಹತ್ವದ ಸಭೆ

ಹೊಸದಿಗಂತ ವರದಿ ಬಳ್ಳಾರಿ:

ನಗರದಲ್ಲಿ ಮೇಗಾ ಜೀನ್ಸ್ ಅಪಾರಲ್ ಪಾರ್ಕ್ ಸ್ಥಾಪನೆಗೆ ಸಂಧಿಸಿದಂತೆ, ಯೋಜನೆ ಮತ್ತು ಸಾಂಖಿಕ್ಯ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಶುಕ್ರವಾರ, ಬೆಂಗಳೂರಿನ ಕೆ.ಐ.ಎ.ಡಿ.ಬಿ ಕೇಂದ್ರ ಕಛೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದರು.

ಈ ಸಂಧರ್ಭದಲ್ಲಿ ಕೆ.ಐ.ಎ.ಡಿ.ಬಿ ಮುಖ್ಯಸ್ಥರಾದ ಗೋವಿಂದರೆಡ್ಡಿ, ಮುಖ್ಯ ಇಂಜಿನಿಯರ್ ಶಂಕರ್ ರಾಠೋಡ್ ಹಾಗೂ ಬಳ್ಳಾರಿ ಜಿಲ್ಲೆಯ ಜೀನ್ಸ್ ಉದ್ಯಮಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳೊಂದಿಗೆ ಚರ್ಚೆ:

ತುಂಗಭದ್ರಾ ಜಲಾಶಯದಿಂದ 126 ನೇ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಎಲ್.ಎಲ್.ಸಿ ಕೆಳಮಟ್ಟದ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ಹರಿಸಲಾಗಿದ್ದ 650 ಕ್ಯೂಸೆಕ್ಸ್ ನೀರು ರೈತರ ಬೆಳೆಗಳೆಗೆ ಸಾಲದಿರುವ ಹಿನ್ನೆಲೆ, ಯೋಜನೆ ಮತ್ತು ಸಾಂಖಿಕ್ಯ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಶುಕ್ರವಾರ ಬೆಂಗಳೂರಿನ ವಿಧಾನ ಸೌಧದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬಳ್ಳಾರಿ ಜಿಲ್ಲೆಯ ಸಮಗ್ರ ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳಿದ್ದರೂ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !