August 14, 2026
Friday, August 14, 2026
spot_img

Independence Day Scam: ಮೊಬೈಲ್ ರೀಚಾರ್ಜ್, ಬಹುಮಾನದ ಆಮಿಷಕ್ಕೆ ಬಲಿಯಾಗಬೇಡಿ: ಪೊಲೀಸರ ವಾರ್ನಿಂಗ್

ಹೊಸದಿಗಂತ ವರದಿ ಅಂಕೋಲಾ:

ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಶುಭಾಶಯ ಪತ್ರಗಳು,ಆಕರ್ಷಕ ಕೊಡುಗೆ,ಮೊಬೈಲ್ ರಿಚಾರ್ಜ್ ಮೊದಲಾದ ಸಂದೇಶಗಳ ಮೂಲಕ ಸೈಬರ್ ವಂಚಕರು ವಂಚನೆಗಿಳಿದಿದ್ದು ಯಾವುದೇ ಅನುಮಾನಾಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ
ಎಚ್ಚರಿಕೆ ನೀಡಲಾಗಿದೆ.

ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಬಹುಮಾನ, ಮೊಬೈಲ್ ರಿಚಾರ್ಜ್ ಮೊದಲಾದ ಆಮಿಷಗಳ ಲಿಂಕ್ ಗಳನ್ನು ಕಳುಹಿಸಿ ಅವುಗಳ ಮೂಲಕ ಅಗತ್ಯ ಮಾಹಿತಿ ಪಡೆದು ಜನರನ್ನು ವಂಚಿಸುವ ಕೆಲಸ ಸೈಬರ್ ಅಪರಾಧಿಗಳಿಂದ ನಡೆಯುತ್ತಿದ್ದು ಯಾವುದೇ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡದಂತೆ, ಬ್ಯಾಂಕ್ ಖಾತೆ ಮತ್ತಿತರ ವಿವರಗಳನ್ನು ಹಂಚಿಕೊಳ್ಳದಂತೆ, ಓಟಿಪಿಯನ್ನು ಯಾರಿಗೂ ನೀಡದಂತೆ ಎಚ್ಚರಿಕೆ ನೀಡಲಾಗಿದ್ದು, ಸೈಬರ್ ವಂಚನೆ ನಡೆದರೆ 1930 ಸಂಖ್ಯೆಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ತಿಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !