August 18, 2026
Tuesday, August 18, 2026
spot_img

ದಿನಭವಿಷ್ಯ | ಈ ರಾಶಿಯವರಿಗೆ ಆರ್ಥಿಕ ಸಂಕಷ್ಟದ ಭೀತಿ; ಸಂಬಂಧಗಳನ್ನು ಉಳಿಸಿಕೊಳ್ಳಲು ಅಹಂ ಬಿಡುವುದು ಅನಿವಾರ್ಯ

ಮೇಷ
ಹದಗೆಟ್ಟ ಸಂಬಂಧ ಸರಿದಾರಿಗೆ ತನ್ನಿ. ನೀವೇ ಬಗ್ಗಿದರೂ ಪರವಾಗಿಲ್ಲ. ಆರ್ಥಿಕ ವ್ಯವಹಾರ ತುಸು ಕಷ್ಟ ಎದುರಿಸಲಿದೆ. ಹಣದ ಬಿಕ್ಕಟ್ಟು ಸಂಭವ.  
ವೃಷಭ
ಅಧಿಕ ಹೊಣೆ. ನಿಭಾಯಿಸಲು ಕಷ್ಟ ಆದೀತು. ಸಂಬಂಧ ಸದೃಢ. ಆರ್ಥಿಕ ಅಸ್ಥಿರತೆ ನಿವಾರಣೆ, ಧನಾಗಮ. ಬಂಧು ಭೇಟಿ.      
ಮಿಥುನ
ನಿಮ್ಮ ಸಾಮರ್ಥ್ಯ ಒರೆಗೆ ಹಚ್ಚುವ ಪ್ರಸಂಗ ಒದಗಲಿದೆ. ಉದ್ಯೋಗ ಬದಲಾವಣೆಯ ಅವಕಾಶ ಸಿಗಲಿದೆ. ದಂಪತಿಗಳಿಗೆ ಹರ್ಷದ ಬೆಳವಣಿಗೆ.
ಕಟಕ
ಒತ್ತಡವು ನಿಮಗೆ ಕೆಲಸದಲ್ಲಿ ಏಕಾಗ್ರತೆ ತಪ್ಪಿಸುವುದು. ಸಂಬಂಧದಲ್ಲಿ ಒಡಕು, ವಾಗ್ವಾದ. ಅನಿರೀಕ್ಷಿತ ಖರ್ಚು ಬರುವುದು.    
ಸಿಂಹ
ಉತ್ಸಾಹದ ಮನಸ್ಥಿತಿ. ಹಾಗಾಗಿ ನಿಮ್ಮ ಉದ್ದೇಶ ಈಡೇರಿಸುವುದು ಕಷ್ಟವಲ್ಲ. ಅದೃಷ್ಟವನ್ನು ಕಾಯುತ್ತಾ ಕೂರಬೇಡಿ. ನೀವೇ ಕಾರ್ಯಕ್ಕಿಳಿಯಬೇಕು.    
ಕನ್ಯಾ
ಗೊಂದಲದ ಮನಸ್ಥಿತಿ. ಇದರಿಂದ ದೈನಂದಿನ ವ್ಯವಹಾರ ಅಸ್ತವ್ಯಸ್ತವಾದೀತು. ನಿಷ್ಕ್ರಿಯರಾಗಿ ಕೂರದಿರಿ. ಕೌಟುಂಬಿಕ ವಾಗ್ವಾದ.  
ತುಲಾ
ಒತ್ತಡದ ದಿನ. ಅಽಕ ಹೊಣೆಗಾರಿಕೆ. ನಿಮ್ಮನ್ನು ದ್ವೇಷಿಸುವವರಿಂದ ದೂರ ಇರಿ. ಅನವಶ್ಯ ವೆಚ್ಚದ ಮೇಲೆ ನಿಯಂತ್ರಣ ಇಡಿ.   ಕೌಟುಂಬಿಕ ಸಹಕಾರ.
ವೃಶ್ಚಿಕ
ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಗದಿದ್ದರೂ ನಿರಾಶೆ ಆಗದು. ಹಣದ ಹರಿವು ಸುಗಮ. ಉಳಿತಾಯವೂ ಸಾಧ್ಯ. ಮನಸ್ಸು ನಿರಾಳ.          
ಧನು
ಇತ್ತೀಚಿನ ಹಿನ್ನಡೆ ಗಳಿಂದ ನೊಂದಿದ್ದರೆ ಇಂದು ನಿರಾಳತೆ ಸಿಗಲಿದೆ. ನಿಮಗೆ ಪೂರಕವಾದ ಬೆಳವಣಿಗೆ. ಆಪ್ತರ ಜತೆಗಿನ ಮುನಿಸು ಮಾಯ.  
ಮಕರ
 ಯಾವುದೇ ವಿಷಯಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ. ಅದು ನಿಮ್ಮ ಘನತೆ ಉಳಿಸುವುದು. ಗುರಿ ಸಾಧನೆ ನಿಮಗೆ ಕಷ್ಟವಾಗಲಾರದು.  
ಕುಂಭ
ಇತರರ ಜತೆ ಸರಿಯಾಗಿ ವ್ಯವಹರಿಸಿ. ತಪ್ಪು ಕಲ್ಪನೆ ಮೂಡದಂತೆ ಎಚ್ಚರ ವಹಿಸಿ. ಸಣ್ಣ ಪ್ರವಾಸದ ಅವಕಾಶ ಸಿಗಲಿದೆ. ಖರ್ಚು ಅಧಿಕ.
ಮೀನ
ವಿಶ್ವಾಸ ವೃದ್ಧಿಯ ಬೆಳವಣಿಗೆ. ಮನೆಯಲ್ಲಿ ಅಧಿಕ ಹೊಣೆಯ ಹೊರೆ. ಹಿರಿಯರಿಗೆ ಸಂಧಿ ನೋವಿನಿಂದ ನೆಮ್ಮದಿ ಸಿಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !