ಹದಗೆಡುತ್ತಿರುವ ಜೀವನಶೈಲಿ ಹಾಗೂ ಅನ್ಹೆಲ್ತಿ ಆಹಾರ ಪದ್ಧತಿ ಪುರುಷರ ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತಿದೆ. ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ ಪ್ರಕಾರ, ಭಾರತೀಯ ಪುರುಷರು ಮತ್ತು ಮಹಿಳೆಯರಲ್ಲಿ ಶೇ.10-14 ರಷ್ಟು ಜನರು ಬಂಜೆತನದಿಂದ ಬಳಲುತ್ತಿದ್ದಾರೆ. ಪ್ರತಿ 15 ಭಾರತೀಯ ದಂಪತಿಗಳಲ್ಲಿ ಒಬ್ಬರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಪುರುಷರಲ್ಲಿಯೂ ಬಂಜೆತನದ ಸಮಸ್ಯೆ ಎದುರಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಅವರು ತಂದೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ನೈಸರ್ಗಿಕವಾಗಿ ಸ್ಪರ್ಮ್ ಕೌಂಟ್ನ್ನು ಹೆಚ್ಚಳ ಮಾಡಲು ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ..

ವೀರ್ಯಾಣುಗಳು ಕಡಿಮೆ ಆಗೋದು ಯಾಕೆ?
ದೇಹದ ಅತಿಯಾದ ತೂಕ, ಕೆಟ್ಟ ಜೀವನಶೈಲಿ, ಅತಿಯಾದ ಫಾಸ್ಟ್ಫುಡ್ ಸೇವನೆ, ಮದ್ಯಪಾನ-ಧೂಮಪಾನ, ಸದಾ ಫೋನ್ನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು, ಅತಿಯಾದ ವರ್ಕೌಟ್ ಹಾಗೂ ಸ್ಟೆರಾಯ್ಡ್ ಸೇವನೆ, ಸದಾ ಲ್ಯಾಪ್ಟಾಪ್ ತೊಡೆಯ ಮೇಲೆ ಇಟ್ಟುಕೊಳ್ಳುವುದು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ.
ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು?
ಕಿತ್ತಳೆ, ಬೆರ್ರಿಗಳು ಹಾಗೂ ಪಾಲಕ್ನಂತಹ ಆಂಟಿಆಕ್ಸಿಡೆಂಟ್ ತುಂಬಿರುವ ಆಹಾರ ಪದಾರ್ಥಗಳ ಸೇವನೆ ಮಾಡಬೇಕು. ಇದರ ಜೊತೆಗೆ ಪಂಪ್ಕಿನ್ ಸೀಡ್ಸ್, ಮೊಟ್ಟೆ, ವಾಲ್ನಟ್ ಕೂಡ ಸೇವನೆ ಮಾಡಬೇಕು. ದೇಹಕ್ಕೆ ಬೇಕಾದಷ್ಟು ಝಿಂಕ್ ಹಾಗೂ ಮೆಗ್ನೀಶಿಯಂ ಇರುವಂತೆ ನೋಡಿಕೊಳ್ಳಬೇಕು. ಇನ್ನು ಉತ್ತಮ ಫ್ಯಾಟ್ ಇರುವ ಫ್ಲಾಕ್ಸ್ಸೀಡ್ ಹಾಗೂ ಮೀನಿನ ಸೇವನೆಯಿಂದ ಸ್ಪರ್ಮ್ ಕೌಂಟ್ ಹೆಚ್ಚಾಗುತ್ತದೆ.

ಮನೆಯಲ್ಲಿ ಮಾಡಿದ ಆಹಾರ ಬಿಟ್ಟು ಹೊರಗಡೆಯ ಜಂಕ್ ಫುಡ್ ಆದಷ್ಟು ಅವಾಯ್ಡ್ ಮಾಡಿ. ಇನ್ನು ದೇಹವನ್ನು ಕೂಲ್ ಆಗಿ ಇಟ್ಟುಕೊಳ್ಳಿ. ನಿತ್ಯವೂ ಅತಿಯಾದ ಬಿಸಿ ನೀರಿನ ಸ್ನಾನ ಮಾಡುವುದು ತಪ್ಪಿಸಿ. ಲ್ಯಾಪ್ಟಾಪ್ ತೊಡೆಯ ಮೇಲೆ ಇಟ್ಟುಕೊಳ್ಳಬೇಡಿ. ಗಾಳಿಯಾಡುವ ಉತ್ತಮ ಕಾಟನ್ ಇನ್ನರ್ವೇರ್ ಬಳಕೆ ಮಾಡಿ.

ಅತಿಯಾದ ಒತ್ತಡ ಅವಾಯ್ಡ್ ಮಾಡಿ. ಸಣ್ಣ ವರ್ಕೌಟ್ ಹಾಗೂ ಎಂಟು ಗಂಟೆಯ ನಿದ್ದೆ ಖಂಡಿತಾ ಮಿಸ್ ಮಾಡಬೇಡಿ.

ಸಣ್ಣ ಸಮಸ್ಯೆ ಇದ್ದರೂ ಮುಚ್ಚುಮರೆಯಿಲ್ಲದೆ ವೈದ್ಯರನ್ನು ಸಂಪರ್ಕ ಮಾಡಿ.



