August 21, 2026
Friday, August 21, 2026
spot_img

ABC Juice Benefits: ತೂಕ ಇಳಿಕೆಯಿಂದ ಹೊಳೆಯುವ ಚರ್ಮದವರೆಗೆ; ಇಲ್ಲಿದೆ ಎಬಿಸಿ ಜ್ಯೂಸ್‌ನ ಪ್ರಯೋಜನಗಳು

ಇಂದಿನ ಧಾವಂತದ ಜೀವನದಲ್ಲಿ ನಮ್ಮ ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುತ್ತಿಲ್ಲ. ತಪ್ಪು ಆಹಾರ ಪದ್ಧತಿಯಿಂದಾಗಿ ಅನೇಕರು ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ದೇಹವನ್ನು ಒಳಗಿನಿಂದಲೇ ಶುದ್ಧೀಕರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇರುವ ಒಂದು ಅತ್ಯುತ್ತಮ ಮನೆಮದ್ದು ಎಂದರೆ ಅದುವೇ ಎಬಿಸಿ ಜ್ಯೂಸ್. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯೋಣ.

ಎಬಿಸಿ ಜ್ಯೂಸ್ ಎಂದರೇನು?

ಇದು ಆಪಲ್, ಬೀಟ್‌ರೂಟ್ ಮತ್ತು ಕ್ಯಾರೆಟ್ ಇವುಗಳ ಮಿಶ್ರಣವಾಗಿದೆ. ಈ ಮೂರರಲ್ಲೂ ವಿಟಮಿನ್ ಎ, ಬಿ1, ಬಿ2, ಬಿ6, ಸಿ, ಇ ಮತ್ತು ಕೆ ಸೇರಿದಂತೆ ಕಬ್ಬಿಣ, ಸತು, ತಾಮ್ರ ಮತ್ತು ಮೆಗ್ನೀಸಿಯಮ್‌ನಂತಹ ಪ್ರಮುಖ ಖನಿಜಗಳು ಸಮೃದ್ಧವಾಗಿವೆ.

ಎಬಿಸಿ ಜ್ಯೂಸ್‌ ಪ್ರಯೋಜನಗಳು

ಹೊಳೆಯುವ ಚರ್ಮ ನಿಮ್ಮದಾಗುತ್ತದೆ

ನೀವು ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ಬಯಸಿದರೆ ಎಬಿಸಿ ಜ್ಯೂಸ್ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಚರ್ಮದ ಮೇಲಿನ ಕಪ್ಪು ಕಲೆ, ಮೊಡವೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತವೆ. ಇದು   ಚರ್ಮವನ್ನು ಕಾಂತಿಯನ್ನು ಹೆಚ್ಚಿಸುತ್ತದೆ.

ರಕ್ತಹೀನತೆ ನಿವಾರಣೆ

ಬೀಟ್‌ರೂಟ್ ಮತ್ತು ಕ್ಯಾರೆಟ್‌ನಲ್ಲಿ ಕಬ್ಬಿಣದ ಅಂಶತುಂಬಾ ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಒಂದು ವರದಾನ.

ದೇಹದ ತೂಕ ಇಳಿಕೆಗೆ ಸಹಕಾರಿ

ಎಬಿಸಿ ಜ್ಯೂಸ್‌ನಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಇರುತ್ತವೆ ಮತ್ತು ನಾರಿನಂಶ ಹೆಚ್ಚಾಗಿರುತ್ತದೆ. ಇದನ್ನು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಅನಗತ್ಯ ಆಹಾರ ತಿನ್ನುವ ಹಸಿವನ್ನು ಇದು ನಿಯಂತ್ರಿಸುತ್ತದೆ. ತೂಕ ಇಳಿಸಿಕೊಳ್ಳಲು ಡಯಟ್ ಮಾಡುವವರಿಗೆ ಇದು ಸೂಕ್ತವಾದ ಪಾನೀಯ.

ರೋಗನಿರೋಧಕ ಶಕ್ತಿ ಹೆಚ್ಚಳ

ಕ್ಯಾರೆಟ್ ಮತ್ತು ಆಪಲ್‌ನಲ್ಲಿರುವ ವಿಟಮಿನ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದು ದೇಹವನ್ನು ಸಾಮಾನ್ಯ ಶೀತ, ಕೆಮ್ಮು, ಜ್ವರ ಮತ್ತು ಇತರೆ ಸೋಂಕುಗಳಿಂದ ರಕ್ಷಿಸುತ್ತದೆ.

ಕಣ್ಣಿನ ದೃಷ್ಟಿ ಸುಧಾರಿಸುತ್ತದೆ

ಕ್ಯಾರೆಟ್‌ನಲ್ಲಿ ಕಣ್ಣಿನ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಅಧಿಕವಾಗಿದೆ. ದಿನವೂ ಎಬಿಸಿ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಮತ್ತು ಕಂಪ್ಯೂಟರ್ ಮುಂದೆ ದೀರ್ಘಕಾಲ ಕೆಲಸ ಮಾಡುವವರ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ ಉತ್ತಮ

ಈ ಜ್ಯೂಸ್‌ನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !