August 24, 2026
Monday, August 24, 2026
spot_img

ವಿಚಾರಣಾಧೀನ ಕೈದಿಗೆ ಆಸ್ಪತ್ರೆಯಲ್ಲೇ ವಿಐಪಿ ಟ್ರೀಟ್‌ಮೆಂಟ್: ಮಿಮ್ಸ್‌ನಲ್ಲಿ ನ್ಯಾಯಾಧೀಶರ ದಿಢೀರ್ ತಪಾಸಣೆ

ಹೊಸದಿಗಂತ ವರದಿ ಮಂಡ್ಯ:

ವಿಚಾರಣಾಧೀನ ಕೈದಿಗೆ ಮಿಮ್ಸ್‌ನ ಜೈಲು ವಾರ್ಡ್‌ನಲ್ಲಿ ರಾಜಾತಿಥ್ಯ ನೀಡುತ್ತಿದ್ದನ್ನು ಪತ್ತೆ ಹಚ್ಚಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಅಧಿಕಾರಿಗಳಿಗೆ ಛೀಮಾರಿ ಹಾಕಿರುವ ಘಟನೆ ನಡೆದಿದೆ.

ರಾಜ್ಯ ಕಾನೂನು ಸೇವೇ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶಶಿಧರ್ ಶೆಟ್ಟಿ, ಪಿಆರ್‌ಓ ಬಾಲಸುಬ್ರಮಣಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಡಾ. ಮೋಹನ್‌ರಾವ್ ನಲ್ವಡೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ. ಅವರು ಮಿಮ್ಸ್‌ ಆಸ್ಪತ್ರೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರಲ್ಲದೆ, ವಿಚಾರಣಾಧೀನ ಕೈದಿ ಮಹಿಳೆಯೊಬ್ಬಳೊಂದಿಗೆ ಇರುವುದನ್ನು ಕಂಡು ಕೆಂಡಾಮಂಡಲರಾಗಿದ್ದಾರೆ.

ಶ್ರೀರಂಗಪಟ್ಟಣ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹಮದ್ ಹುಸೇನ್ ಎಂಬಾತನೇ ಮಿಮ್ಸ್‌ ಆಸ್ಪತ್ರೆಯ ಜೈಲು ವಾರ್ಡ್‌ನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !