August 24, 2026
Monday, August 24, 2026
spot_img

ಗದ್ದಲದ ನಡುವೆಯೇ ವಿಧಾನ ಪರಿಷತ್ತಿನಲ್ಲಿ 2 ಮಸೂದೆ ಪಾಸ್: ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಹೊಸ ನಿಯಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪಟ್ಟು ಹಿಡಿದು ವಿಧಾನ ಪರಿಷತ್ತಿನಲ್ಲಿ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ‘ಕರ್ನಾಟಕ ಪುರಸಭೆಗಳ ತಿದ್ದುಪಡಿ ಮಸೂದೆ 2026’ ‘ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಹಾಗೂ ನಿರ್ವಹಣಾ ಮಸೂದೆ 2026’ ಅನ್ನು ಅಂಗೀಕರಿಸಲಾಯಿತು.

ಪ್ರತಿಭಟನೆ ನಡುವೆಯೇ ಪುರಸಭೆ ಮಸೂದೆಗೆ ಅಸ್ತು

ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಕರ್ನಾಟಕ ಪುರಸಭೆಗಳ ತಿದ್ದುಪಡಿ ಮಸೂದೆ 2026ನ್ನು ಸದನದಲ್ಲಿ ಮಂಡಿಸಿದರು. ಆದರೆ ಮಸೂದೆ ಕುರಿತು ಚರ್ಚೆ ನಡೆಯುವ ಮುನ್ನವೇ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ತೀವ್ರಗೊಂಡಿತು.

ಈ ಗದ್ದಲದ ನಡುವೆಯೇ ಸಭಾಪತಿ ಸಲೀಂ ಅಹ್ಮದ್ ಅವರು ಮಸೂದೆಯನ್ನು ಮತಕ್ಕೆ ಹಾಕಿ ಅಂಗೀಕಾರಗೊಂಡಿದೆ ಎಂದು ಘೋಷಿಸಿದರು.

ಇದನ್ನೂ ಓದಿ:

ಅಪಾರ್ಟ್‌ಮೆಂಟ್ ನಿರ್ವಹಣೆಗೆ ಹೊಸ ಕಾನೂನು

ಬಳಿಕ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಮಸೂದೆ 2026ನ್ನು ಸದನದಲ್ಲಿ ಮಂಡಿಸಿದರು. ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಮಸೂದೆ ರೂಪಿಸಲಾಗಿದೆ ಎಂದರು.

ನಿವಾಸಿ ಸಂಘಗಳಿಗೆ ನೋಂದಣಿ, ಆಡಿಟ್ ಕಡ್ಡಾಯ

ಹೊಸ ನಿಯಮ ಜಾರಿಗೆ ಬಂದ ಬಳಿಕ ಅಪಾರ್ಟ್‌ಮೆಂಟ್ ನಿವಾಸಿಗಳ ಕಲ್ಯಾಣ ಸಂಘಗಳು ಕಡ್ಡಾಯವಾಗಿ ನೋಂದಣಿಯಾಗಬೇಕಾಗುತ್ತದೆ. ಅಲ್ಲದೆ, ಸಂಘಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಲು ಪ್ರತಿವರ್ಷ ಲೆಕ್ಕಪರಿಶೋಧನೆ ನಡೆಸುವುದೂ ಕಡ್ಡಾಯವಾಗಲಿದೆ. ಈ ಮೂಲಕ ಅಪಾರ್ಟ್‌ಮೆಂಟ್‌ಗಳ ನಿರ್ವಹಣೆ ಹಾಗೂ ನಿವಾಸಿಗಳ ನಡುವಿನ ಹಲವು ಸಮಸ್ಯೆಗಳಿಗೆ ಸ್ಪಷ್ಟ ನಿಯಮಾವಳಿ ರೂಪಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !