August 25, 2026
Tuesday, August 25, 2026
spot_img

ಬೆಳಗ್ಗೆ ಎದ್ದ ತಕ್ಷಣ ಹಸಿವೇ ಆಗುತ್ತಿಲ್ಲವಾ? ಇದು ಅನಾರೋಗ್ಯವಲ್ಲ! ಈ ಕಾರಣಗಳಿರಬಹುದು ನೋಡಿ

ಬೆಳಗ್ಗೆ ಎದ್ದ ಕೆಲ ಸಮಯದಲ್ಲಿ ಹೊಟ್ಟೆ ಹಸಿವಾದರೆ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಹಲವರಿಗೆ ಬೆಳಗ್ಗೆ ಎದ್ದ ನಂತರ ಹಸಿವಾಗೋದೇ ಇಲ್ಲ. ಎದ್ದ ತಕ್ಷಣ ಬಿಡಿ ಬೆಳಗ್ಗೆ ಹತ್ತು ಗಂಟೆ ಆಗುವವರೆಗೂ ತಿಂಡಿ, ನೀರು ಏನೂ ಇಲ್ಲದಂತೆ ಇರುತ್ತಾರೆ. ನಮಗೆ ಹಸಿವಾಗುತ್ತಿಲ್ಲ ಎಂದರೆ ಜೀರ್ಣಕ್ರಿಯೆಯಲ್ಲಿ ಏನೋ ಸಮಸ್ಯೆ ಇರಬಹುದೇನೋ ಎಂದು ಜನ ಅಂದುಕೊಳ್ತಾರೆ. ಆದರೆ ಬೆಳಗ್ಗೆ ಹಸಿವಾಗದೇ ಇರೋದಕ್ಕೆ ಕಾರಣಗಳಿವೆ..

ರಾತ್ರಿ ಏನು ತಿಂದಿದ್ದೀರಿ?

ರಾತ್ರಿ ಏನು ಊಟ ಮಾಡಿದ್ದೀರಿ ಅನ್ನೋದು ತುಂಬಾನೇ ಮುಖ್ಯ. ರಾತ್ರಿ ಪ್ರೋಟೀನ್‌, ಫ್ಯಾಟ್ ತುಂಬಿರುವ ಆಹಾರವನ್ನು ತಿಂದರೆ ಬೆಳಗ್ಗೆ ನಿಮಗೆ ಹಸಿವಾಗೋದಿಲ್ಲ. ರಾತ್ರಿ ಚೂರು ಉಪ್ಪಿಟ್ಟು ತಿಂದೆ, ಮಧ್ಯಾಹ್ನ ಉಳಿದಿದ್ದ ಅನ್ನ ಸಾರು ತಿಂದೆ ಅಂದ್ರೆ ಬೆಳಗ್ಗೆ ಎದ್ದ ತಕ್ಷಣವೇ ಹೊಟ್ಟೆ ಗುರ್‌ ಅನ್ನೋದು ಗ್ಯಾರಂಟಿ.

ಹಾರ್ಮೋನ್‌ಗಳ ಬದಲಾವಣೆ

ರಾತ್ರಿ ಊಟ ಮಾಡಿ ಮಲಗಿದ ನಂತರ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆ ಆಗುತ್ತದೆ. ಕೆಲವರಿಗೆ ಹಸಿವು ಆಗುವುದು, ಆಗದಿರುವುದು ಹಾರ್ಮೋನ್‌ಗಳ ಮೇಲೆ ಡಿಪೆಂಡ್‌ ಆಗಿರುತ್ತದೆ. ಹೊಟ್ಟೆ ಹಸಿವು ಮಾಡುವ ಹಾರ್ಮೋನ್‌ ಕೆಲವರಲ್ಲಿ ಕಡಿಮೆ ಇರುತ್ತದೆ. ಇದು ಸಮಸ್ಯೆಯಲ್ಲ. ಒಬ್ಬೊಬ್ಬರ ಜೀರ್ಣಕ್ರಿಯೆ ಒಂದೊಂದು ರೀತಿ ಅಷ್ಟೆ!

ಒತ್ತಡದಿಂದಲೂ ಸಮಸ್ಯೆ

ಆಂಕ್ಸೈಟಿ ಹಾಗೂ ಒತ್ತಡವೂ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಮನಸ್ಸಿಗೆ ನೋವಾದಾಗಲೂ ಜನ ಊಟಕ್ಕೆ ಆಸಕ್ತಿ ತೋರಿಸುವುದಿಲ್ಲ. ಆಂಕ್ಸೈಟಿ ಲೆವೆಲ್‌ಗಳಿಂದ ಹಸಿವು ಕಡಿಮೆಯಾಗುತ್ತದೆ. ನೆಮ್ಮದಿಯಾಗಿದ್ದರಿಗೆ ಮಾತ್ರ ಇಷ್ಟಪಟ್ಟಷ್ಟು ಊಟ ತಿಂಡಿ ಮಾಡಲು ಸಾಧ್ಯ.

ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಕೊಳ್ಳಿ

ಬೆಳಗ್ಗೆ ಹಸಿವಾಗದೇ ಕಿರಿಕಿರಿ ಆಗೋದು ಪ್ರೆಗ್ನೆನ್ಸಿಯ ಲಕ್ಷಣವಾಗಿದೆ. ಮಾರ್ನಿಂಗ್‌ ಸಿಕ್‌ನೆಸ್‌ ಬೆಳಗ್ಗೆ ಇದ್ದದ್ದೇ. ಅದನ್ನು ಬಿಟ್ಟು ದಿನದ ಯಾವ ಸಮಯದಲ್ಲಾದರೂ ಕಿರಿಕಿರಿ ಉಂಟಾಗಬಹುದು. ಜೀರ್ಣವಾಗದೇ ಇರೋದು, ಮಲಬದ್ಧತೆ, ಹೊಟ್ಟೆ ಉಬ್ಬರದಿಂದ ಹಸಿವಾಗೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !