ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲೇ ಬಹುನಿರೀಕ್ಷಿತ ಸಿನಿಮಾ ʼಟಾಕ್ಸಿಕ್ʼ ನಾಳೆ ತೆರೆಯ ಮೇಲೆ ಅಬ್ಬರಿಸಲಿದೆ. ಸಿನಿಮಾ ರಿಲೀಸ್‌ಗೂ ಮುನ್ನ ನಟ ಯಶ್ ಧರ್ಮಸ್ಥಳದ ಮಂಜುನಾಥನ ದರುಶನಕ್ಕಾಗಿ ಆಗಮಿಸಿದ್ದಾರೆ. ಚೆನ್ನೈನಲ್ಲಿ ನಡೆದ ಟಾಕ್ಸಿಕ್ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗಿಯಾಗಿದ್ದ ಯಶ್ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಮಂಗಳೂರು ಏರ್‌ಪೋರ್ಟ್‌ನಲ್ಲಿ ನಟ ಯಶ್‌ರನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದು, ಅದ್ಧೂರಿ ಸ್ವಾಗತ ಕೋರಲಾಗಿದೆ. ಯಶ್ ತಮ್ಮ ಪ್ರತೀ ಸಿನಿಮಾ ರಿಲೀಸ್ ಮುನ್ನಾದಿನ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರುಶನ ಪಡೆಯುತ್ತಾರೆ. ಅಂತೆಯೇ ಇದೀಗ ಮಂಗಳೂರಿಗೆ ಆಗಮಿಸಿರುವ ಯಶ್ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ. ಮೂಲಗಳ ಪ್ರಕಾರ ಸಿನಿಮಾ ರಿಲೀಸ್ ದಿನ, ಅಂದರೆ ನಾಳೆ ಯಶ್ ಮಂಜುನಾಥನ ದರುಶನ ಪಡೆದು ಸಿನಿಮಾ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.
https://www.instagram.com/reel/DcdCWmOxgVG
ಗೀತು ಮೋಹನ್‌ದಾಸ್ ಅವರ ಕನಸಿನ ಕೂಸಾಗಿರುವ ಟಾಕ್ಸಿಕ್ ಸಿನಿಮಾ ನಾಳೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ನಯನತಾರಾ, ಬಾಲಾಜಿ ಮನೋಹರ್, ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಹಾಗೂ ಕೈಲ್ ಪಾಲ್‌ನಂತಹ ದಿಗ್ಗಜರು ನಟಿಸಿದ್ದಾರೆ.



