September 30, 2026
Wednesday, September 30, 2026
spot_img

ಅದೇನ್ರೀ ಅಸಹ್ಯ! ಬಿಕಿನಿ ಹಾಕಿಕೊಂಡೇ ರಾಖಿ ಕಟ್ಟಬೇಕಾ? ಕ್ರಿತಿ ಸೆನೋನ್‌ ಜಾಹೀರಾತಿಗೆ ಕಂಗನಾ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೇನು ಕೆಲವೇ ದಿನಗಳಲ್ಲಿ ರಕ್ಷಾಬಂಧನ ಹಬ್ಬ ಆಗಮಿಸಲಿದೆ. ಸಹೋದರ-ಸಹೋದರಿಯರ ಪ್ರೀತಿಯ ಸಾರುವ ದಿನ ಇದಾಗಿದ್ದು, ಭಾರತದಲ್ಲಿ ಈ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ರಕ್ಷಾಬಂಧನದ ವಿಶೇಷ ಸಂದರ್ಭದಲ್ಲಿ ಗೋಲ್ಡ್‌ ಕಂಪನಿಯೊಂದು ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಾಲಿವುಡ್‌ ನಟಿ ಕ್ರಿತಿ ಸೆನೋನ್‌ ಭಾಗಿಯಾಗಿದ್ದಾರೆ. ಕ್ರಿತಿ ಸೆನೋನ್‌ ಹಾಕಿರುವ ಬಟ್ಟೆ ಅಶ್ಲೀಲವಾಗಿದೆ ಎಂದು ನಟಿ ಕಂಗನಾ ರನೌತ್‌ ಪರೋಕ್ಷವಾಗಿ ಹೇಳಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕ್ರಿತಿ ಸೆನೊನ್‌ ಜಾಹೀರಾತಿನ ಬಗ್ಗೆ ಹೆಸರು ಹೇಳದೇ ಮಾತನಾಡಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ನೂರಾರು ಬಗೆಯ ಉಡುಪುಗಳಿವೆ. ಪುರುಷರ ಉಡುಪುಗಳಲ್ಲಿ ವೆರೈಟಿ ಇಲ್ಲದೇ ಇರಬಹುದು. ಆದರೆ ಹೆಣ್ಣುಮಕ್ಕಳ ಬಟ್ಟೆಗಳ ವೆರೈಟಿ ಬಗ್ಗೆ ಗೊತ್ತಿರದವರಿಲ್ಲ. ಲೆಹೆಂಗಾ, ಕುರ್ತಾ ಸೆಟ್‌, ಜೀನ್ಸ್‌ ಟೀಶರ್ಟ್‌, ಶಾರ್ಟ್ಸ್‌, ಕ್ರಾಪ್‌ಟಾಪ್‌, ಸೀರೆ, ನೈಟಿ, ನೈಟ್‌ಡ್ರೆಸ್‌ ಹೀಗೆ ಸಾವಿರಾರು ಬಗೆಬಗೆಯ ಬಟ್ಟೆಗಳಿರುವಾಗ, ಅಣ್ಣನಿಗೆ ರಾಖಿ ಕಟ್ಟೋದಕ್ಕೆ ಯಾರಾದ್ರೂ ಬಿಕಿನಿ ಹಾಕ್ತಾರಾ? ಮೈತುಂಬಾ ಬಟ್ಟೆ ಹಾಕದೇ ಜಾಹೀರಾತನ್ನು ಸೇಲ್‌ ಮಾಡೋದು ಕಷ್ಟವಾ? ಎಂದು ಪ್ರಶ್ನಿಸಿದ್ದಾರೆ.

ಯಾವ ಮನೆಯಲ್ಲಿ ಯಾವ ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ಬ್ರಾಲೆಟ್‌ನಂತಹ ಬಟ್ಟೆ ಧರಿಸಿಕೊಂಡು ರಾಖಿ ಕಟ್ತಾರೆ? ಇದು ಕಾಮನ್‌ ಅಲ್ವೇ ಅಲ್ಲ! ಜಾಹೀರಾತು ಕಂಪನಿಗಳಿಗೆ ಬಟ್ಟೆ ಆಯ್ಕೆ ಮಾಡೋಕೆ ಬರೋದಿಲ್ವಾ? ಅಥವಾ ಬೇಕಂತಲೇ ಇಂಥ ಬಟ್ಟೆಗಳನ್ನು ಹಾಕಿ ಜಾಹೀರಾತು ಮಾರ್ತಾರಾ? ಯಾರಿಗೆ ಗೊತ್ತು! ಎಂದು ಪೋಸ್ಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಕಮೆಂಟ್‌ ವೈರಲ್‌ ಆಗಿದ್ದು, ಹಲವರು ಅವರ ಮಾತನ್ನು ಗೌರವಿಸಿದ್ದಾರೆ ಜೊತೆಗೆ ಇದರಲ್ಲಿ ನಟಿ ಕ್ರಿತಿಯದ್ದೂ ತಪ್ಪಿಲ್ಲ. ಕಾಸ್ಟ್ಯೂಮ್‌ ಡಿಸೈನರ್‌ ಸಮಸ್ಯೆ ಎಂದು ಹೇಳಿದ್ದಾರೆ.

Must Read