August 26, 2026
Wednesday, August 26, 2026
spot_img

ಹಿಂದೂ ಮಹಾಗಣಪತಿ ಮಹೋತ್ಸವ: ಚಿತ್ರದುರ್ಗದ ಮುರುಘಾ ರಾಜೇಂದ್ರ ಮೈದಾನದಲ್ಲಿ ಗಣ್ಯರ ಸಮ್ಮುಖದಲ್ಲಿ ಧ್ವಜಪೂಜೆ

ಹೊಸದಿಗಂತ ವರದಿ ಚಿತ್ರದುರ್ಗ:

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ‘ಹಿಂದೂ ಮಹಾಗಣಪತಿ ಮಹೋತ್ಸವ’ದ ಅಂಗವಾಗಿ ಬುಧವಾರ ನಗರದ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಿಸಲಾಯಿತು. ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಗಣ್ಯರಿಂದ ಚಾಲನೆ ನೀಡಲಾಯಿತು.

ಕಳೆದ 18 ವರ್ಷಗಳಿಂದ ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಹಿಂದೂ ಮಹಾ ಗಣಪತಿ ಸ್ಥಾಪನೆ ಮಾಡಿ ಪೂಜೆ ಹಾಗೂ ಶೋಭಾಯಾತ್ರೆ ನಡೆಸಲಾಗುತ್ತಿದೆ. ಪ್ರತಿವರ್ಷ ಇದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ. ಅಲ್ಲದೇ ಮಹೋತ್ಸವ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸೆಪ್ಟೆಂಬರ್ 14 ರಂದು ಗಣೇಶಮೂರ್ತಿಯ ಪ್ರತಿಷ್ಠಾಪನೆ ಹಾಗೂ ಅಕ್ಟೋಬರ್ 3 ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ.

ಸೆಪ್ಟೆಂಬರ್ 9 ಅಥವಾ 13 (ಬುಧವಾರ, ಭಾನುವಾರ) ಸಮಯ ಮತ್ತು ನಕ್ಷತ್ರವನ್ನು ಆಧರಿಸಿ ಹಿಂದೂ ಮಹಾ ಗಣಪತಿಯ ಪುರಪ್ರವೇಶ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಗುವುದು. ಸೆಪ್ಟೆಂಬರ್ 14 ರಂದು ಸೋಮವಾರ ಬೆಳಿಗ್ಗೆ 9:18 ರಿಂದ 10:45 ಶುಭ ಮುಹೂರ್ತದಲ್ಲಿ ಗಣೇಶಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 3 ರಂದು ಅತ್ಯಂತ ವಿಜೃಂಭಣೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

ಬೆಳ್ಳಿಗೆ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ನೆರದಿದ್ದ ಸಾವಿರಾರು ಭಕ್ತಾಧಿಗಳು, ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಲಂಬಾಣಿ ಗುರುಪೀಠದ ಸರ್ದಾರ ಸೇವಾಲಾಲ್ ಸ್ವಾಮೀಜಿ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.

ಇದನ್ನೂ ಓದಿ;

ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಜಿ.ಪಂ. ಮಾಜಿ ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್, ಯುವ ಮುಖಂಡ ಡಾ. ಸಿದ್ದಾರ್ಥ ಗುಂಡಾರ್ಪಿ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಸುಧೀರ್, ಪ್ರಧಾನ ಕಾರ್ಯದರ್ಶಿ ಚನ್ನಕೇಶವ್, ಗೌರವಾಧ್ಯಕ್ಷ ಷಡಾಕ್ಷರಪ್ಪ, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸತ್ಸಂಗ ಪ್ರಮುಖ್ ಚಂದ್ರಶೇಖರ್, ಪ್ರಾಂತ ಉಪಾಧ್ಯಕ್ಷ ಡಾ. ಮಂಜುನಾಥ್, ರೇಖಾ, ನಗರಸಭೆ ಮಾಜಿ ಸದಸ್ಯರಾದ ಸುರೇಶ್, ನಾಗರಾಜ್, ವೆಂಕಟೇಶ್ ಯಾದವ್, ಬದರಿನಾಥ್, ಕೊಲ್ಲಿಲಕ್ಷ್ಮೀ, ಪ್ರಶಾಂತ್, ಶರಣ್ ಕುಮಾರ್, ಶ್ರೇಣಿಕ್, ಬಸಮ್ಮ, ನಾಗರಾಜ್ ಬೇದ್ರೆ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬುಧವಾರ ಬೆಳ್ಳಿಗೆ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆ ನಡೆಸುತ್ತಿದ್ದ ಸಮಯದಲ್ಲಿ ವರುಣನ ಆಗಮನವಾಯಿತು. ಆ ಮೂಲಕ ವರುಣದೇವ ಕಾರ್ಯಕ್ರಮಕ್ಕೆ ಶುಭ ಸಮ್ಮತಿ ಎಂಬಂತೆ ಮಳೆ ಸುರಿಸಿದನು. ಇದನ್ನು ಕಂಡ ಭಕ್ತ ಸಮೂಹ ಸಂತೋಷದಿಂದ ಹರ್ಷೋದ್ಗಾರ ಮಾಡಿದರು. ಸುರಿವ ಮಳೆಯನ್ನೂ ಲೆಕ್ಕಿಸದೆ ಜನರು ಪೊಜೆಯಲ್ಲಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !