ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ನಿನ್ನೆ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಕಂಡಿದೆ. ಮೊದಲ ದಿನವೇ ಎಲ್ಲ ಶೋಗಳು ಹೌಸ್‌ಫುಲ್ ಆಗಿದ್ದು, ಬರೋಬ್ಬರಿ 140 ಕೋಟಿಗೂ ಅಧಿಕ ಹಣ ಬಾಚಿಕೊಂಡಿದೆ.
ಭಾರತಕ್ಕಿಂತ ವಿದೇಶದಲ್ಲಿಯೇ ಸಿನಿಮಾ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಲಾಗಿದೆ. ಈ ವರ್ಷ ರಿಲೀಸ್ ಆದ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಿದ ಎರಡನೇ ಭಾರತೀಯ ಸಿನಿಮಾ ಇದಾಗಿದೆ. ನಟ ರಣ್‌ವೀರ್ ಸಿಂಗ್ ಅಭಿನಯದ ಧುರಂಧರ್ 2 ಮೊದಲ ದಿನವೇ ನೂರು ಕೋಟಿ ಕ್ಲಬ್ ದಾಟಿತ್ತು. ಸದ್ಯ ಧುರಂಧರ್ ದಾಖಲೆಯನ್ನು ಇನ್ನೂ ಟಾಕ್ಸಿಕ್ ದಾಟಿಲ್ಲ.

ಒಟ್ಟಾರೆ ಆರು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಪ್ರೀಮಿಯರ್ ಶೋ ಇಲ್ಲದೆ, ಸೆಲೆಬ್ರಿಟಿ ಶೋ ಇಲ್ಲದೆಯೇ ಭರ್ಜರಿ ಓಪನಿಂಗ್ ಕಂಡಿದೆ. ಪ್ರೇಕ್ಷಕರಲ್ಲಿ ಸಿನಿಮಾ ಬಗ್ಗೆ ಮಿಕ್ಸ್ ಒಪಿನಿಯನ್ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದು, ಮತ್ತೊಂದು ಬಾರಿ ನೋಡುತ್ತೇವೆ ಎಂದು ಹೇಳಿದ್ರೆ ಹಲವರು ಯಾಕಾದ್ರೂ ಥಿಯೇಟರ್‌ಗೆ ಬಂದ್ವೋ, ಮೂರು ಗಂಟೆಗಳ ಕಾಲ ಈ ಸಿನಿಮಾ ನೋಡೋದು ಟಾರ್ಚರ್ ಎಂದು ಹೇಳಿದ್ದಾರೆ.

ಸದ್ಯ ಇನ್ನೆರಡು ದಿನದಲ್ಲಿ ವೀಕೆಂಡ್ ಆರಂಭವಾಗಲಿದ್ದು, ಸಿನಿಮಾ ಇನ್ನಷ್ಟು ಕಮಾಯಿ ಮಾಡಲಿದೆ. ಬೆಂಗಳೂರು ನಗರದಲ್ಲೇ 34 ಪ್ರಮುಖ ಕೇಂದ್ರಗಳಲ್ಲಿ ಸಿನಿಮಾಗೆ ಹೌಸ್‌ಫುಲ್ ಓಪನಿಂಗ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೂ ಶೇ.55ಕ್ಕೂ ಹೆಚ್ಚು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.



