August 28, 2026
Friday, August 28, 2026
spot_img

ದಸರಾ ಸೆಲಬ್ರೇಷನ್‌ ಜೋರು: ಅರಣ್ಯಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿದ ಗಜಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಮೈಸೂರಿನಲ್ಲಿ ದಸರಾಗಾಗಿ ಸಕಲ ಸಿದ್ಧತೆ ನಡೆಯುತ್ತಿದ್ದು, ಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗಾಗಿ ಗಜಪಡೆ ಅರಣ್ಯಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿದೆ.

ಗಜಪಡೆಯ ಗಜಪಯಣಕ್ಕೆ ಇಂದು ಚಾಲನೆ ದೊರಕಿದ್ದು, ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಅದಾದ ನಂತರ ಶುಭ ತುಲಾ ಲಗ್ನದಲ್ಲಿ ಗಜಪಡೆ ಅರಮನೆ ಅಂಗಳ ಪ್ರವೇಶಿಸಿದೆ. ಇದೀಗ ಅರಮನೆಯ ಆವರಣದಲ್ಲಿ ಬಂದು ನಿಂತಿರುವ ಗಜಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ಈ ಬಾರಿ ಜಂಬೂಸವಾರಿಯಲ್ಲಿ ಒಂಬತ್ತು ಆನೆಗಳು ಭಾಗಿಯಾಗಲಿವೆ. ಎರಡು ದಿನಗಳ ಹಿಂದೆ ನಾಗರಹೊಳೆ ಬಳಿಯ ವೀರನಹಳ್ಳಯಿಂದ ಗಜಪಯಣ ಆರಂಭವಾಗಿದ್ದು, ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದವು. ಇದೀಗ ವಿಶೇಷ ಪೂಜೆಯೊಂದಿಗೆ ಅರಮನೆಯ ಮುಂಭಾಗದ ಜಯಮಾರ್ತಾಂಡ ದ್ವಾರ ತಲುಪಿವೆ. ಇಂದು ಸಂಜೆ ಗಜಪಡೆಯ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗುತ್ತದೆ. ಆನೆಗಳು ಪರಿಸರಕ್ಕೆ ಹೊಂದಿಕೊಂಡ ನಂತರ ಜಂಬೂಸವಾರಿಯ ತಾಲೀಮು ಆರಂಭವಾಗುತ್ತದೆ.

ಜಂಬೂಸವಾರಿಯ ಆನೆಗಳ ಹೆಸರೇನು? ವಯಸ್ಸೆಷ್ಟು?

ಧನಂಜಯ 45
ಪ್ರಶಾಂತ 54
ಗೋಪಿ 43
ಶ್ರೀರಾಮ 41
ಕಾವೇರಿ 46
ಮಹೇಂದ್ರ 42
ಲಕ್ಷ್ಮೀ 54
ಏಕಲವ್ಯ 41
ಶ್ರೀಕಂಠ 57

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !