November 2, 2026
Monday, November 2, 2026
spot_img

ಸೌಜನ್ಯಾ ಪ್ರಕರಣ ತನಿಖೆಗೆ ವೇಗ: ಮಂಗಳೂರಿಗೆ SIT ಚೀಫ್ ರಾಥೋಡ್, ಕುಸುಮಾವತಿ, ವಿಠಲ್ ಗೌಡ ವಿಚಾರಣೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಎಸ್‌ಐಟಿ ಸಾರಥ್ಯ ವಹಿಸಿರುವ ಚೇತನ್ ಸಿಂಗ್ ರಾಥೋಡ್ ಇಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.

ಈ ನಡುವೆ ಸೌಜನ್ಯ ಅವರ ತಾಯಿ ಕುಸುಮಾವತಿ ಹಾಗೂ ಮಾವ ವಿಠಲ್ ಗೌಡ ಅವರಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು ಇಂದು ಅವರನ್ನು ರಾಥೋಡ್ ಅವರು ವಿಚಾರಣೆ‌ ನಡೆಸಿ ಹೇಳಿಕೆ ಪಡೆಯಲಿದ್ದಾರೆ.

14 ವರ್ಷ ಹಿಂದಿನ ಈ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋಟ್೯ ಮೂರು ತಿಂಗಳ ಅವಕಾಶ ನೀಡಿ ಆದೇಶ ನೀಡಿದ್ದು, ಹೀಗಾಗಿ ತನಿಖೆ ವೇಗ ಪಡೆದುಕೊಂಡಿದೆ.

ಸೌಜನ್ಯಾ ಶವ ಪತ್ತೆಯಾದ ಮಣ್ಣಸಂಕ ಪರಿಸರದಲ್ಲಿ ಎಸ್ ಐಟಿ ಈಗಾಗಲೇ ಕ್ರೈಮ್ ಸೀನ್ ಮರುಸೃಷ್ಟಿ ನಡೆಸಿ ಸ್ಥಳ ಮಹಜರು ನಡೆಸಿದೆ. ಇದಕ್ಕೂ ಮುನ್ನ ಪ್ರಕರಣ ನಡೆದ ಸಂದರ್ಭ ತನಿಖೆ ನಡೆಸಿದ್ದ ಅಧಿಕಾರಿಗಳು, ಸಿಬ್ಬಂದಿಗಳನ್ನು ಎಸ್ ಐಟಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಸೌಜನ್ಯಾ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನೂ ಸಂಗ್ರಹಿಸಲಾಗಿದೆ. ಇದೀಗ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಯುತ್ತಿದ್ದು, ಇನ್ನಷ್ಟು ಮಂದಿಗೆ ವಿಚಾರಣೆ ನೋಟೀಸ್ ಜಾರಿಯಾಗುವ ಸಾಧ್ಯತೆ ಇದೆ.

Must Read