August 28, 2026
Friday, August 28, 2026
spot_img

ಕಡೆಗೂ ರಾಜೀನಾಮೆ ನೀಡಿದ ಬಿ. ನಾಗೇಂದ್ರ : ಅಂಗೀಕಾರ, ತಿರಸ್ಕಾರ ಎರಡೂ ಸಿಎಂ ಡಿಕೆಶಿಗೆ ಬಿಟ್ಟದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಕೀಯದಲ್ಲಿ ಮುಖ್ಯವಾದ ಬೆಳವಣಿಗೆಯೊಂದು ನಡೆದಿದ್ದು, ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲ ಬೆಳವಣಿಗೆಗಳ ನಂತರ ಗುರುವಾರವೇ ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ತಲುಪಿಸಿದ್ದಾರೆ.

ಹಗರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದಾರೆ ಅಷ್ಟೇ ಆರೋಪಿ ಎಂದು ಸಾಬೀತಾಗಿಲ್ಲ ಎಂದು ಸಿಎಂ ಡಿಕೆಶಿ ಹೇಳಿದ್ದರು. ಆದರೆ ಇದೀಗ ರಾಜೀನಾಮೆ ಪತ್ರ ಅವರ ಟೇಬಲ್‌ ತಲುಪಿದ್ದು, ಇದನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಅವರ ನಿರ್ಧಾರವಾಗಿರಲಿದೆ. ಈವರೆಗೂ ರಾಜೀನಾಮೆ ಅಂಗೀಕಾರವಾಗಿಲ್ಲ.

ಹಗರಣಗಳ ಆರೋಪದಲ್ಲಿ ಭಾಗಿಯಾಗಿರುವ ಬಿ. ನಾಗೇಂದ್ರರಂಥವರಿಗೆ ಸಚಿವ ಸ್ಥಾನ ಯಾಕೆ? ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕಿಳಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು. ಸರ್ಕಾರಕ್ಕೆ ತಮ್ಮಿಂದ ಮುಜುಗರವಾಗೋದು ಬೇಡ ಎನ್ನುವ ಕಾರಣಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ವರಿಷ್ಠರು ಹಾಗೂ ಸಿಎಂ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಜನ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !