October 14, 2026
Wednesday, October 14, 2026
spot_img

ನಿಲ್ಲದ ಕಾಡಾನೆ ಗ್ಯಾಂಗ್ ಹಾವಳಿ : ಹಾಸನದಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಬೆಳೆ ಹಾನಿ ‌

ಹೊಸದಿಗಂತ ವರದಿ ಹಾಸನ:

ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಗುಜ್ಜನಹಳ್ಳಿ ಗ್ರಾಮದ ಕೃಷಿಕ ಕೃಷ್ಣರಾಜ ಅರಸ್‌ ಅವರ ಉತ್ತೊಳಲು ಗದ್ದೆಬೈಲಿನಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಬೆಳೆಯನ್ನು ಎಂಟು ಕಾಡಾನೆಗಳ ಹಿಂಡು ಹಾಳು ಮಾಡಿರುವ ಘಟನೆ ನಡೆದಿದೆ.

ಗುರುವಾರ ರಾತ್ರಿ ಕಾಡಿನಿಂದ ನಾಡಿಗೆ ಬಂದಿದ್ದ ಎಂಟು ಕಾಡಾನೆಗಳು ಗದ್ದೆಗೆ ನುಗ್ಗಿ ನಾಟಿ ಮಾಡಿದ್ದ ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿವೆ. ಇದರಿಂದ ಕೃಷಿಕನಿಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ.

ಕಾಡಾನೆಗಳ ಹಾವಳಿ ನಿರಂತರವಾಗಿ ನಡೆಯುತ್ತಿರುವುದರಿಂದ ಮಲೆನಾಡಿನ ಕೃಷಿಕರು ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

Must Read