August 29, 2026
Saturday, August 29, 2026
spot_img

ದಿನಭವಿಷ್ಯ: ಅನವಶ್ಯಕ ವಿಚಾರಗಳಿಗೆ ಜಾಸ್ತಿ ಚಿಂತೆ ಮಾಡ್ಬೇಡಿ, ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ

ಮೇಷ
ಶುಭಸುದ್ದಿ ಕಾದಿದೆ. ಉದ್ದೇಶ ಈಡೇರಿಕೆ. ನಿಮ್ಮ ಸಾಧನೆಗೆ ಮೆಚ್ಚುಗೆ. ಕೌಟುಂಬಿಕ ಸಮಾರಂಭ. ಆರೋಗ್ಯದ ಚಿಂತೆ ಪರಿಹಾರ, ನೆಮ್ಮದಿ.
ವೃಷಭ
ಸಂತೋಷ, ಬೇಸರ ಎರಡೂ ಉಂಟಾಗಲಿದೆ. ಅನವಶ್ಯಕ ವಿಚಾರಗಳಿಗೆ ಅತಿಯಾಗಿ ಚಿಂತೆ ಮಾಡಬೇಡಿ. ಕೀಳರಿಮೆ ತ್ಯಜಿಸಿ. ವೆಚ್ಚ ನಿಯಂತ್ರಿಸಿ.
ಮಿಥುನ
ನಿಮಗೆ ಒಗ್ಗದ ಕೆಲಸ ಮಾಡುವ ಅನಿವಾರ್ಯ ಒದಗಬಹುದು. ಕಚೇರಿ ವದಂತಿಗಳಿಂದ ದೂರವಿರಿ. ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿರಿ.
ಕಟಕ
ವೃತ್ತಿ ಕ್ಷೇತ್ರದಲ್ಲಿ ಉಂಟಾಗಿದ್ದ ಗೊಂದಲ, ಬಿಕ್ಕಟ್ಟು ಪರಿಹಾರ. ನಿಮ್ಮ ನಿಲುವಿಗೆ ಬೆಂಬಲ. ವಾಹನ ಚಾಲನೆಯಲ್ಲಿ ಧಾವಂತ ತೋರಬೇಡಿ.
ಸಿಂಹ
ಕೌಟುಂಬಿಕ ಸಮಸ್ಯೆ ಕಳೆದು ನೆಮ್ಮದಿ. ಉತ್ತಮ ಹೊಂದಾಣಿಕೆ. ಬಾಕಿ ಉಳಿದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ಪ್ರಯಾಣದ ಅವಕಾಶ.
ಕನ್ಯಾ
ನಿಮ್ಮ ಸುತ್ತ ಸಂತೋಷದ ಪರಿಸರ. ಒಳ್ಳೆಯ ಬೆಳವಣಿಗೆ. ಉದ್ಯೋಗ ಅವಕಾಶ. ಆತ್ಮೀಯರ ಜತೆ ಕಾಲ ಕಳೆಯುವ ಪ್ರಸಂಗ.
ತುಲಾ
ಉದ್ಯಮದಲ್ಲಿ ತುಸು ಕಠಿಣ ಪರಿಸ್ಥಿತಿ. ಆದರೆ ಇದು ತಾತ್ಕಾಲಿಕ. ನೆಗೆಟಿವ್ ಚಿಂತನೆಯ ಜನರಿಂದ ದೂರವಿರಿ. ಸಂಗಾತಿ ಜತೆ ವಾಗ್ವಾದ ಉಂಟಾದೀತು.
ವೃಶ್ಚಿಕ
ನಿಮ್ಮ ಬದುಕಿನಲ್ಲಿ ಹೊಸ ಭರವಸೆ ಮೂಡಲಿದೆ. ಹಳೆಯ ಚಿಂತೆ ಪರಿಹಾರ. ಕೌಟುಂಬಿಕ ಮನಸ್ತಾಪ ಅಂತ್ಯ. ಧನಾಗಮ.
ಧನು
ನಿಮ್ಮ ಯೋಜನೆ ಪದೇಪದೇ ಬದಲಿಸದಿರಿ. ಅದರಿಂದ ತೊಂದರೆ ನಿಮಗೇ. ಯಾವುದೋ ಒಂದು ವಿಷಯಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಿ.
ಮಕರ
ನಿಮ್ಮ ಯೋಜನೆಗೆ ಹೊಸ ಚಿಂತನೆ ಜೋಡಿಸಿ. ಹಳೆಯದಕ್ಕೇ ಜೋತು ಬೀಳಬೇಡಿ. ಕೌಟುಂಬಿಕ ಸಾಮರಸ್ಯ. ದೈಹಿಕ ನೋವು ಬಾಧಿಸಬಹುದು.
ಕುಂಭ
ನಿಮ್ಮ ಕೆರಿಯರ್‌ಗೆ ಸಂಬಂಧಿಸಿ ಮಹತ್ವದ ನಿರ್ಧಾರ ಬೇಗನೆ ತಾಳಿ. ಸಂಬಂಧದಲ್ಲಿ ಅನುಮಾನ ಇಟ್ಟುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಯಶಸ್ಸು.
ಮೀನ
ಬಿಡುವಿಲ್ಲದ ದಿನ. ಉದ್ವಿಗ್ನತೆ ಹೆಚ್ಚು. ಸಂಜೆ ವೇಳೆಗೆ ಎಲ್ಲವೂ ನಿರಾಳ. ಕಾಡುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಕೌಟುಂಬಿಕ ಸಮಾಧಾನ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !