August 30, 2026
Sunday, August 30, 2026
spot_img

ದಿನಭವಿಷ್ಯ: ಇಂದು ಬಯಸಿದ್ದು ಈಡೇರಲಿದೆ, ಆಪ್ತರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಿ

ಮೇಷ
ಕೌಟುಂಬಿಕ ಶುಭ ಸಮಾರಂಭ.ಬಂಧು ಭೇಟಿ. ವೃತ್ತಿ ರಾಜಕೀಯದಿಂದ ದೂರ ಇರಿ. ಪ್ರೀತಿಯಲ್ಲಿ ಯಶಸ್ಸು. ಧನವ್ಯಯ.
ವೃಷಭ
ಸಿಹಿಕಹಿಗಳ ಮಿಶ್ರಣ ಈ ದಿನ. ಸಹಜವಾಗೇ ದಿನ ಸಾಗಿದರೂ ಸಣ್ಣ ವಿಷಯ ಮನಸ್ಸು ಕೆಡಿಸಬಹುದು. ಬಂಧು ಜತೆ ಮಾತಿನ ಚಕಮಕಿ ನಡೆದೀತು.
ಮಿಥುನ
ಇತರರ ಬೆದರಿಕೆಗೆ ಮಣಿಯಬೇಡಿ. ನಿಮ್ಮ ನಿಲುವು ದೃಢ ಆಗಿರಲಿ. ಸಂತುಲಿತ ಆಹಾರದಿಂದ ಆರೋಗ್ಯ ಕಾಯ್ದುಕೊಳ್ಳಿ. ಆರ್ಥಿಕ ಒತ್ತಡ ಅಧಿಕ.
ಕಟಕ
ಹಣದ ವಿಚಾರ ಚಿಂತೆಗೆ ಕಾರಣ. ಕಾರ್ಯ ವಿಳಂಬದಿಂದ ಹತಾಶೆ. ಕೆಲವರ ಅಸಹಕಾರ. ಆರೋಗ್ಯ ಚಿಂತೆ ಪರಿಹಾರ. ಧನವ್ಯಯ.
ಸಿಂಹ
ಅದೃಷ್ಟದ ದಿನ. ಬಯಸಿದ್ದು ಈಡೇರಲಿದೆ. ಸಂಭವನೀಯ ಆಪತ್ತು ಪರಿಹಾರ. ನಿಮ್ಮ ಕೋರಿಕೆಗೆ ಆಪ್ತರಿಂದ ಪೂರಕ ಸ್ಪಂದನೆ.
ಕನ್ಯಾ
ಕಠಿಣ ಪರಿಶ್ರಮ ಉತ್ತಮ ಫಲ ನೀಡಲಿದೆ. ಅತಿಯಾದ ಕೆಲಸ ನಿಮ್ಮ ಸಂಗಾತಿ ಜತೆ ಬಿರುಕು ಸೃಷ್ಟಿಸಲಿದೆ. ಅವರಿಗೂ ಸ್ವಲ್ಪ ಸಮಯ ಕೊಡಿ.
ತುಲಾ
ಮೌನ ಬಂಗಾರ ನಿಜ. ಆದರೆ ನೀವು ಇಂದು ಮಾತನಾಡಬೇಕಾದ ಅಗತ್ಯವಿದೆ. ಅದರಿಂದ ಉದ್ದೇಶ ಸಾಧನೆ. ಸಮಸ್ಯೆ ಪರಿಹಾರ.
ವೃಶ್ಚಿಕ
ಎಲ್ಲ ಕಾರ್ಯ ಸುಗಮವಾಗಿ ಸಾಗಲಿದೆ. ಆದರೂ ಒತ್ತಡ ಅನುಭವಿಸುವಿರಿ. ಇಷ್ಟದ ವ್ಯಕ್ತಿಯ ಭೇಟಿ ಸಂತೋಷ ತುಂಬಲಿದೆ.
ಧನು
ಇಂದು ಯಾವುದೇ ಕೆಲಸ ಸುಗಮವಾಗಿ ಸಾಗದು. ಪದೇಪದೇ ಅಡ್ಡಿ. ಆಪ್ತರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಿ. ಸಂಜೆ ಶುಭಸುದ್ದಿ ಸಿಗಲಿದೆ.
ಮಕರ
ನಿಮ್ಮ ಕನಸಿನ ಯೋಜನೆಗೆ ಅಡ್ಡಿ ಬಂದೀತು. ಆತುರದ ತೀರ್ಮಾನ ಬೇಡ. ಮನೆಯಲ್ಲಿ ವಾಗ್ವಾದ. ಸಹನೆ ಕಾಯ್ದುಕೊಳ್ಳಿ.
ಕುಂಭ
ಹಣ ಮುಖ್ಯ ನಿಜ, ಆದರೆ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಅವರಿಗೂ ಗಮನಕೊಡಿ. ಹಳೆಯ ಆರೋಗ್ಯ ಸಮಸ್ಯೆ ಶಾಶ್ವತ ಪರಿಹಾರದಿಂದ ನೆಮ್ಮದಿ.
ಮೀನ
ಖರೀದಿಗೆ ತಡೆ ಹಾಕಿ, ಖರ್ಚು ನಿಯಂತ್ರಿಸಿ. ಸಂಬಂಧದಲ್ಲಿ ಬಿರುಕು ಮೂಡದಂತೆ ನೋಡಿ. ಮೌನಧಾರಣೆ ಜಗಳ ತಪ್ಪಿಸಬಲ್ಲುದು, ಗೊತ್ತಿರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !