ಮೇಷ
ನೀವು ಅಡಗಿಸಿಟ್ಟ ರಹಸ್ಯ ಬಯಲಾದೀತು.ಸಂಗಾತಿ ಜತೆಗೆ ಬಂಧು ಭೇಟಿ. ಚಿಂತೆಯೊಂದು ಪರಿಹಾರಗೊಳ್ಳುವ ಸಂಕೇತ ಕಾಣುತ್ತಿದೆ.
ವೃಷಭ
ನಿಮ್ಮ ಕಾರ್ಯ ಸರಿಯಾದ ದಿಕ್ಕಿನಲ್ಲೆ ಸಾಗುವುದು. ಕುಟುಂಬದ ಜತೆ ಮುಕ್ತವಾಗಿ ವ್ಯವಹರಿಸಿ. ಮುಚ್ಚುಮರೆ ಮಾಡದಿರಿ.
ಮಿಥುನ
ನಿಮ್ಮ ಭಾವನೆ ಅಭಿವ್ಯಕ್ತಿಸಲು ಹಿಂಜರಿಕೆ ತೋರದಿರಿ. ಹಣ ಗಳಿಕೆಯ ಪ್ರಯತ್ನ -ಲಿಸಲಿದೆ. ಸಂಗಾತಿ ಜತೆಗೆ ವಾಗ್ವಾದ ನಡೆದೀತು.
ಕಟಕ
ಮನೆಯಲ್ಲೆ ಕೂತು ಕೊರಗದಿರಿ. ಹೊರಗೆ ಹೋಗಿ ಆನಂದಿಸಿ. ಅನ್ಯರ ಜತೆ ಖಾಸಗಿ ವಿಷಯ ಚರ್ಚಿಸಬೇಡಿ. ತಪ್ಪಿದರೆ ಸಮಸ್ಯೆ ಉಂಟಾದೀತು.
ಸಿಂಹ
ದುಡಿಮೆಯಿಂದ ವಿರಾಮ ಬಯಸುವಿರಿ. ಆದರೆ ಮಾಡಬೇಕಾದ ಕೆಲಸ ಮಾಡಿ ಮುಗಿಸಿ. ಭಾವನಾತ್ಮಕ ಏರುಪೇರು ಅನುಭವಿಸುವಿರಿ.
ಕನ್ಯಾ
ನಿರೀಕ್ಷೆಯು ನಿರಾಶೆಗೆ ದಾರಿ ಮಾಡಲಿದೆ.ಖಾಸಗಿ ಬದುಕಿನ ಸಮಸ್ಯೆ ಪರಿಹರಿಸಲು ಆದ್ಯತೆ ಕೊಡಿ. ಖರ್ಚಿನ ಮೇಲೆ ನಿಯಂತ್ರಣ ಇರಲಿ.
ತುಲಾ
ಉದ್ಯಮ ವಿಸ್ತರಿಸುವ ಯೋಜನೆ -ಲಿಸಲಿದೆ. ಕೆಲ ವಿಚಾರಗಳಲ್ಲಿ ಹೆಚ್ಚಿನ ನಿಗಾ ಅವಶ್ಯ. ಕೋಪವು ವಿವೇಕ ನಾಶ ಮಾಡಲು ಅವಕಾಶ ಕೊಡಬೇಡಿ.
ವೃಶ್ಚಿಕ
ಇಂದು ಯಾವ ಕೆಲಸ ಮಾಡಬೇಕೆಂದು ಸ್ಪಷ್ಟತೆಯಿರಲಿ. ಗೊಂದಲಕ್ಕೆ ಆಸ್ಪದ ಕೊಡಬೇಡಿ. ಅನ್ಯರ ಭಾವನೆಗೆ ಬೆಲೆ ಕೊಡಿ. ಕೌಟುಂಬಿಕ ಸಹಕಾರ.
ಧನು
ನಿಮ್ಮ ಪ್ರಯತ್ನ ವಿಫಲಗೊಳಿಸಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ. ಭಾವುಕ ಸನ್ನಿವೇಶದಲ್ಲಿ ಪ್ರಬುದ್ಧ ರಾಗಿ ವರ್ತಿಸಿ.
ಮಕರ
ಬೇಕಾಬಿಟ್ಟಿ ಧೋರಣೆ ಪ್ರತಿಕೂಲ ಪರಿಣಾಮ ಉಂಟುಮಾಡೀತು. ಕೆಲ ವಿಷಯ ಗಂಭೀರವಾಗಿ ಪರಿಗಣಿಸಿ. ಕೆಲವರ ವಿರೋಧ ಕಟ್ಟಿಕೊಳ್ಳುವಿರಿ.
ಕುಂಭ
ಆರ್ಥಿಕ ಪ್ರಗತಿ. ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ಹಳೆ ಸ್ನೇಹಿತರ ಭೇಟಿ. ನಡೆನುಡಿಯಲ್ಲಿ ಸಂಯಮ ವಹಿಸಿರಿ.
ಮೀನ
ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗುವಿರಿ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಭಿನ್ನಮತ ಪರಿಹಾರ. ಹಣದ ಸಮಸ್ಯೆ ಪರಿಹಾರ ಕಾಣಲಿದೆ.
ದಿನ ಭವಿಷ್ಯ: ಗೊಂದಲಕ್ಕೆ ಆಸ್ಪದ ಕೊಡಬೇಡಿ, ನೆನಸಿದ ಕಾರ್ಯ ಸರಿಯಾದ ದಿಕ್ಕಿನಲ್ಲೆ ಸಾಗಲಿದೆ!
