March 12, 2026
Thursday, March 12, 2026
spot_img

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಫೈಟ್: ಟಾಸ್ ಗೆದ್ದ ಜಮ್ಮು ಬ್ಯಾಟಿಂಗ್!

ಹೊಸ ದಿಗಂತ ವರದಿ,ಹುಬ್ಬಳ್ಳಿ:

ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ರಣಜಿ ಟ್ರೋಫಿ ಫೈನಲ್ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ನಡುವಿನ ಪಂದ್ಯ ಇಂದಿನಿಂದ ಆರಂಭವಾಗಿದೆ. ಅತಿಥಿ ಜಮ್ಮು- ಕಾಶ್ಮೀರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಯಾವರ್ ಹಸನ್ ಹಾಗೂ ಕ್ರಮಾನ ಇಕ್ಬಾಲ್ ಆರಂಭಿಕರಾಗಿ ಮೈದಾನಕ್ಕೆ ಇಳಿದಿದ್ದಾರೆ‌. ಜಮ್ಮು ಕಾಶ್ಮೀರ ತಂಡದ ಆರಂಭಿಕ ಆಟಗಾರ ಶುಭಂ ಖಜೂರಿಯಾ ಅವರು ಗಾಯಗೊಂಡಿದ್ದರಿಂದ ಫೈನಲ್ ಪಂದ್ಯ ಆಡುತ್ತಿಲ್ಲ‌. ಜೆ.ಕೆ ತಂಡ ೧೦.೨ ಓವರ್ ನಲ್ಲಿ ೧೮ ರನ್ ಗಳಿಸಿದಾಗ ಪ್ರಸಿದ್ಧ ಕೃಷ್ಣಾ ಇಕ್ಬಾಲ್ ಅವರ ವಿಕೆಟ್ ಪಡೆದರು. ಸೆಕೆಂಡ್ ಸ್ಲಿಪ್ ನಲ್ಲಿ ನಿಂತಿದ್ದ ಕೆ.ಎಲ್. ರಾಹುಲ್ ಅವರ ಕ್ಯಾಚ್ ಪಡೆದು ಸಂಭ್ರಮಿಸಿದರು.

ಟ್ರೋಫಿ ಅನಾವರಣ: ಬಿಸಿಸಿಐ ಅಧ್ಯಕ್ಷ ಮಿಥುನ ಮನಹಾಸ ಅವರು ರಣಜಿ ಟೂರ್ನಿಯ ಟ್ರೋಫಿ ಅನಾವರಣ ಮಾಡಿದರು. ಇನ್ನೂ ರಾಜನಗರದ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ನೋಡಿ ಖುಷಿ ಪಟ್ಟರು. ರಾಹುಲ್ ರಾಹುಲ್ ಎಂಬ ಕೂಗು ಆಗಾಗ ಕೇಳಿ ಬರುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಕಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.

ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !