August 30, 2026
Sunday, August 30, 2026
spot_img

‘ಡ್ರಗ್ಸ್‌ ಮುಕ್ತ ಭಾರತವೇ ವಿಕಸಿತ ಭಾರತದ ಗುರಿ’: ‘ಮನ್‌ ಕಿ ಬಾತ್‌’ ನಲ್ಲಿ ಯುವಜನರಿಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾನುವಾರದ 137ನೇ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇದ್ರ ಮೋದಿ, ದೇಶದ ಯುವಜನರ ಭವಿಷ್ಯ ವನ್ನು ಮಾದಕ ವಸ್ತುಗಳಿಂದ ರಕ್ಷಿಸುವುದು, ಡ್ರಗ್ಸ್‌ ಮುಕ್ತ ಭಾರತ ನಿರ್ಮಿಸುವುದು ಸರ್ಕಾರದ ಸಂಕಲ್ಪ ಎಂದು ಹೇಳಿದರು.

‘ನಶಾ ಮುಕ್ತ ಯುವ ಫಾರ್‌ ವಿಕಸಿತ ಭಾರತ’ ಅಭಿಯಾನಕ್ಕೆ ಯುವಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಕಂಟೆಂಟ್‌ ಕ್ರಿಯೇಟರ್‌ ಗಳು ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಭಾಷೆಗಳಲ್ಲಿ ಹಾಡು ಹಾಗೂ ಕಿರು ನಾಟಕಗಳನ್ನು ಮಾಡಿ ಜನರಿಗೆ ತಲುಪಿಸುವಂತೆ ಮನವಿ ಮಾಡಿದರು.

ಹರ್ ಘರ್ ತಿರಂಗಾ’ಗೆ ಮೆಚ್ಚುಗೆ

ಆಗಸ್ಟ್ ತಿಂಗಳು ಜನರಿಗೆ ದೇಶಭಕ್ತಿಯನ್ನು ಭಾವನೆಯನ್ನು ಮತ್ತಷ್ಟು ಗಟ್ಟಿ ಗೊಳಿಸಿದ್ದು, ‘ಹರ್‌ ಘರ್‌ ತಿರಂಗಾ’ ಅಭಿಯಾನ ದೇಶದಾದ್ಯಂತ ದೇಶಪ್ರೇಮದ ಭಾವನೆ ಹೆಚ್ಚಿಸಿದೆ ಎಂದರು. ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರೀಯ ಕೈಮಗ್ಗ ದಿನ, ರಾಷ್ಟ್ರೀಯ ಬಾಹ್ಯಾಕಾಶ ದಿನ ಸೇರಿದಂತೆ ಹಲವು ಮಹತ್ವದ ದಿನಾಚರಣೆಗಳನ್ನು ಆಚರಿಸಿದ್ದಾಗಿ ನೆನಪಿಸಿಕೊಂಡರು.

ಇದನ್ನೂ ಓದಿ:

ಈ ವರ್ಷ, ‘ಸೂರ್ಯಪಥ ತಿರಂಗ’ ಉಪಕ್ರಮದ ಮೂಲಕ, ನಮ್ಮ ತ್ರಿವರ್ಣ ಧ್ವಜವು ಪ್ರಪಂಚದಾದ್ಯಂತ ಒಂದು ವಿಶಿಷ್ಟ ಪ್ರಯಾಣವನ್ನು ಪ್ರಾರಂಭಿಸಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವೋಕಲ್‌ ಫಾರ್‌ ಲೋಕಲ್‌’ ಸಂಕಲ್ಪ

ದೇಶ ಭಕ್ತಿಯ ಜೊತೆಗೆ ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಸಾರ್ವಜನಿಕ ಸ್ಥಳಗಳು, ಜಲಮೂಲಗಳನ್ನು ಸ್ವಚ್ಛವಾಗಿಡುವಂತೆ ಕರೆ ನೀಡಿದರು. ಮುಂಬರುವ ಹಬ್ಬಗಳಿಗೆ ದೇಶಿಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ ‘ವೋಕಲ್‌ ಫಾರ್‌ ಲೋಕಲ್‌’ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಬೇಕಾಗಿ ಮನವಿ ಮಾಡಿದರು.

ಮಹಿಳೆಯರ ಉದ್ಯಮಕ್ಕೆ ಪ್ರೋತ್ಸಾಹ

ಮಹಿಳೆಯ ಉದ್ಯಮ ಬೆಳೆಯುವುದರಿಂದ ಇಡೀ ಕುಟುಂಬದ ಭವಿಷ್ಯವೂ ಸುಧಾರಣೆಯಾಗುತ್ತದೆ ಎಂದ ಪ್ರಧಾನಿ ಮೋದಿ, ‘ಪಿಎಂ ಸ್ವನಿಧಿ’ ಯೋಜನೆಯಿಂದ 35 ಲಕ್ಷಕ್ಕೂ ಹೆಚ್ಚು ಮಹಿಳೆಯರು ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

ಚಿಕ್ಕಮಗಳೂರಿನ ಕಾಫಿ ಬೆಳೆಯ ನಡುವೆ ಅವಕಾಡೊ ಬೆಳೆದು ಲಾಭ ಗಳಿಸಿಕೊಂಡಿರುವ ರೈತನ ಬಗ್ಗೆ ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !