August 30, 2026
Sunday, August 30, 2026
spot_img

ಟೆನ್ಷನ್ ಮುಕ್ತ ಲೈಫ್‌ಗೆ ಜಪಾನೀಸ್ ಸೀಕ್ರೆಟ್ಸ್: ಮೈಂಡ್ ಕೂಲ್ ಮಾಡೋ 7 ಸಿಂಪಲ್ ಟ್ರಿಕ್ಸ್

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗೋವರೆಗೂ ಜಂಜಾಟ, ಕೆಲಸದ ಟೆನ್ಷನ್… ಇದೆಲ್ಲ ಸಾಕು ಅನಿಸಿಬಿಟ್ಟಿರುತ್ತೆ ಅಲ್ವಾ? ಏನಪ್ಪಾ ಇದು ಲೈಫ್, ಒಂಚೂರು ನೆಮ್ಮದಿನೇ ಇಲ್ವಲ್ಲಾ ಅಂತ ಅಂದುಕೊಳ್ಳದವರೇ ಇಲ್ಲ. ಆದ್ರೆ, ಜಪಾನ್ ದೇಶದ ಜನ ನೋಡಿ, ಎಷ್ಟೇ ಕೆಲಸ ಇದ್ದರೂ ಸಖತ್ ಪೀಸ್, ಆರಾಮಾಗಿ ಇರ್ತಾರೆ. ಇದಕ್ಕೆ ರೀಸನ್ ಏನು ಅಂದ್ರೆ ಅವರ ಬಳಿ ಒಂದಷ್ಟು ಸೂಪರ್ ಲೈಫ್ ಹ್ಯಾಕ್ಸ್ ಇವೆ. ಅದನ್ನ ನಾವೂ ಟ್ರೈ ಮಾಡಿದ್ರೆ ಮೈಂಡ್ ಕೂಲ್ ಆಗಿರುತ್ತೆ..

ರೀಸನ್ ಫಾರ್ ಹ್ಯಾಪಿನೆಸ್

ಬೆಳಿಗ್ಗೆ ಎದ್ದ ತಕ್ಷಣ ಛೇ! ಮತ್ತೆ ಅದೇ ದಿನ, ಅದೇ ಕೆಲಸ ಅಂತ ಬೇಸರ ಮಾಡ್ಕೊಬೇಡಿ. ದಿನಾ ಬೆಳಿಗ್ಗೆ ಏಳೋಕೆ ನಿಮಗೊಂದು ರೀಸನ್ ಇರಬೇಕು. ಇವತ್ತು ನನ್ನಿಷ್ಟದ ಕಾಫಿ ಕುಡಿಯೋದು, ಗೆಳೆಯನ ಜೊತೆ ಮಾತಾಡೋದು ಅಥವಾ ಹೊಸದೇನೋ ಕಲಿಯೋದು, ಹೀಗೆ ಚಿಕ್ಕ ವಿಷಯದಲ್ಲೂ ಖುಷಿ ಹುಡುಕೋದನ್ನ ಕಲೀರಿ.

ಡೋಂಟ್ ರಶ್

ಯಾವುದೇ ದೊಡ್ಡ ಕೆಲಸ ಬಂದ್ರೆ ಅಯ್ಯೋ, ಇದನ್ನು ಹೆಂಗೆ ಮುಗಿಸೋದು? ಅಂತ ಪ್ಯಾನಿಕ್ ಆಗ್ಬೇಡಿ. ಜಪಾನೀಯರು ದಿನಕ್ಕೆ ಜಸ್ಟ್ 1% ಮಾತ್ರ ಇಂಪ್ರೂವ್ ಆಗ್ತಾರಂತೆ. ಸಣ್ಣ ಎಫರ್ಟ್ ಹಾಕಿ, ಕೆಲಸ ತಾನಾಗಿಯೇ ಮುಗಿಯುತ್ತೆ, ಟೆನ್ಷನ್ ಆಗಲ್ಲ.

ಸ್ಪೆಂಡ್ ಟೈಮ್ ವಿತ್ ನೇಚರ್

ದಿನಪೂರ್ತಿ ಮೊಬೈಲ್, ಲ್ಯಾಪ್‌ಟಾಪ್ ನೋಡಿ ಕಣ್ಣು, ತಲೆ ಎಲ್ಲಾ ಹಾಳಾಗಿರುತ್ತೆ. ದಿನಕ್ಕೆ 15 ನಿಮಿಷ ಅಕ್ಕಪಕ್ಕದ ಪಾರ್ಕ್‌ಗೋ, ಗಿಡ-ಮರಗಳಿರೋ ಕಡೆಗೋ ಹೋಗಿ ಗಾಳಿ ಸೇವಿಸಿ ಬನ್ನಿ. ಮೈಂಡ್ ತಕ್ಷಣ ರಿಲ್ಯಾಕ್ಸ್ ಆಗುತ್ತೆ.

ಯಾವುದು ಪರ್ಫೆಕ್ಟ್ ಆಗಿರಲ್ಲ

ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕು ಅಂದುಕೊಂಡ್ರೆನೆ ಟೆನ್ಷನ್ ಜಾಸ್ತಿ. ಲೈಫ್ ಅಲ್ಲಿ ಸಣ್ಣಪುಟ್ಟ ಕೊರತೆಗಳು ಇದ್ದೇ ಇರುತ್ತೆ. ಏನೇ ಆದ್ರೂ ಓಕೆ, ನಾನಂತೂ ಹ್ಯಾಪಿ ಅಂತ ಸ್ವೀಕರಿಸೋದನ್ನ ಕಲೀರಿ.

ಪ್ರಾಬ್ಲಮ್ಸ್ ಸಿಕ್ಕಾಪಟ್ಟೆ ಕಾಮನ್

ಲೈಫ್ ಅಲ್ಲಿ ಪ್ರಾಬ್ಲಮ್ಸ್ ಬರೋದು ಕಾಮನ್. ಆ ಕ್ಷಣದಲ್ಲಿ ಕೋಪ ಮಾಡಿಕೊಳ್ಳದೆ, ತಾಳ್ಮೆಯಿಂದ ಸಿಚುವೇಶನ್ ಫೇಸ್ ಮಾಡೋದೇ ಬೆಸ್ಟ್. ಸಮಾಧಾನದಿಂದ ಯೋಚಿಸಿದ್ರೆ ಪ್ರತಿಯೊಂದಕ್ಕೂ ಸೊಲ್ಯೂಷನ್ ಸಿಕ್ಕೇ ಸಿಗುತ್ತೆ.

ಸೋತರು ಹ್ಯಾಪಿ ಆಗಿರಿ

ಜಪಾನಿನಲ್ಲಿ ಮಡಕೆ ಒಡೆದು ಹೋದ್ರೆ ಅದಕ್ಕೆ ಬಂಗಾರದ ನೀರು ಹಾಕಿ ಜೋಡಿಸ್ತಾರೆ. ಅಂದ್ರೆ, ಲೈಫ್ ನಲ್ಲಿ ನಮಗೆ ಆಗೋ ಗಾಯಗಳು, ಸೋಲುಗಳು ನಮ್ಮನ್ನು ಇನ್ನಷ್ಟು ಸ್ಟ್ರಾಂಗ್ ಮಾಡುತ್ತೆ. ಹಳೆಯ ಕಹಿ ಘಟನೆಗಳನ್ನು ನೆನೆದು ಕೊರಗಬೇಡಿ, ಅದ್ರಿಂದ ಲೈಫ್ ಲೆಸೆನ್ ಕಲಿಯಿರಿ.

ನೋಡಿದ್ರಾ, ಎಷ್ಟು ಸಿಂಪಲ್ ಅಲ್ವಾ? ಇಂದಿನಿಂದಲೇ ಇವುಗಳಲ್ಲಿ ಒಂದೆರಡು ರೂಲ್ಸ್ ಫಾಲೋ ಮಾಡಿ ನೋಡಿ, ಲೈಫ್ ಎಷ್ಟು ಪೀಸ್‌ಫುಲ್ ಆಗಿರುತ್ತೆ ಅಂತ ನಿಮಗೇ ಗೊತ್ತಾಗುತ್ತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !