August 31, 2026
Monday, August 31, 2026
spot_img

ಹರ್ಯಾಣ್ವಿ ಗಾಯಕ ಅಂಕಿತ್‌ ಬಾಲಿಯಾನ್‌ ಮರ್ಡರ್‌ ಕೇಸ್‌: ಇಬ್ಬರು ಶಂಕಿತ ಆರೋಪಿಗಳು ಎನ್‌ಕೌಂಟರ್‌ಗೆ ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರ್ಯಾಣ್ವಿ ಗಾಯಕ ಹಾಗೂ ಯುಟ್ಯೂಬರ್‌ ಅಂಕಿತ್‌ ಬಾಲಿಯಾನ್‌ ಮರ್ಡರ್‌ಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತ ಶೂಟರ್‌ಗಳಿಗೆ ಗುಂಡು ಹಾರಿಸಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿ ಪ್ರದೇಶದಲ್ಲಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಇಬ್ಬರು ಶೂಟರ್ಸ್‌ ಬಲಿಯಾಗಿದ್ದು, ಇವರಿಬ್ಬರು ಕುಖ್ಯಾತ ಗೋಗಿ ಗ್ಯಾಂಗ್‌ಗೆ ಸೇರಿದವರು ಎನ್ನಲಾಗಿದೆ.

ಸುಮಿತ್‌(22) ಮೋಹಿತ್‌ (24) ಎನ್‌ಕೌಂಟರ್‌ಗೆ ಬಲಿಯಾದ ಶಂಕಿತ ಶೂಟರ್‌ಗಳಾಗಿದ್ದಾರೆ. ಇವರಿಬ್ಬರೂ ಹರಿಯಾಣದ ಸೋನಿಪತ್‌ನವರಾಗಿದ್ದು, ಇವರಿಬ್ಬರ ಮೇಲೂ ಸಾಕಷ್ಟು ಕೇಸ್‌ಗಳಿವೆ. ಇವರನ್ನು ಹುಡುಕಿಕೊಟ್ಟರೆ ಐವತ್ತು ಸಾವಿರ ರೂಪಾಯಿ ನೀಡುವುದಾಗಿಯೂ ಪೊಲೀಸ್‌ ಇಲಾಖೆ ಘೋಷಣೆ ಮಾಡಿತ್ತು.

ಆಗಸ್ಟ್‌ 26 ರಂದು ಬಾಲಿಯಾನ್‌ ಜಿಮ್‌ನಲ್ಲಿ ವರ್ಕೌಟ್‌ ಮುಗಿಸಿದ ನಂತರ ಕಾರ್‌ಬಳಿ ಬರುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಆಗಂತುಕರು 16 ಸುತ್ತು ಗುಂಡು ಹಾರಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳ ಹುಡುಕಾಟ ಜಾರಿಯಲ್ಲಿದೆ. ಕೊಲೆಯಾದ ಮರುದಿನ ಗೋಗಿ ಗ್ಯಾಂಗ್‌ನ ಸದಸ್ಯನೊಬ್ಬ ತಾನೇ ಬಾಲಿಯಾನ್‌ರನ್ನು ಕೊಲೆ ಮಾಡಿದ್ದು ಎಂದು ಹೇಳಿಕೊಂಡಿದ್ದ.

ನಾಲ್ಕು ದಿನಗಳೊಳಗೆ ಆರೋಪಿಗಳನ್ನು ಹುಡುಕದೇ ಇದ್ದಲ್ಲಿ ಮುಖ್ಯಮಂತ್ರಿಗಳ ನಿವಾಸದ ಎದುರು ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಬಾಲಿಯಾನ್‌ ಪತ್ನಿ ಎಚ್ಚರಿಕೆ ನೀಡಿದ್ದರು. ಸದ್ಯ ಪೊಲೀಸರು ಇಬ್ಬರು ಶಂಕಿತ ಶೂಟರ್‌ಗಳನ್ನು ಎನ್‌ಕೌಂಟರ್‌ನಲ್ಲಿ ಶೂಟ್‌ ಮಾಡಿದ್ದು, ಇನ್ನಿಬ್ಬರು ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !