September 1, 2026
Tuesday, September 1, 2026
spot_img

ಈ ಪಾದಯಾತ್ರೆಯು 6 ಕೋಟಿ ಕನ್ನಡಿಗರ ಆಶೋತ್ತರದ ಕಹಳೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಹೊಸದಿಗಂತ ವರದಿ ರಾಯಚೂರು

ಪಾದಯಾತ್ರೆಯು 6 ಕೋಟಿ ಕನ್ನಡಿಗರ ಆಶೋತ್ತರದ ಕಹಳೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ಲೇಷಿಸಿದರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಹಳೆ ಊದುವ ಮೂಲಕ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ ಅವರು, ಅಧಿಕಾರದ ಮದದಲ್ಲಿ ಮೆರೆಯುವ ರೈತ ವಿರೋಧಿ, ಜನವಿರೋಧಿ, ಪ್ರಗತಿವಿರೋಧಿ, ಮಹಿಳಾ ವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಿದ ಈ ಸರಕಾರವನ್ನು ಕಿತ್ತೊಗೆಯುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಇದು ಚುನಾವಣಾ ಪ್ರಚಾರದ ಸಭೆ ಅಲ್ಲ, ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಸಂಕಲ್ಪದೊಂದಿಗೆ ಹೋರಾಟ ಪ್ರಾರಂಭವಾಗಿದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !