November 2, 2026
Monday, November 2, 2026
spot_img

ಮಡಿಕೇರಿಯಲ್ಲಿ ಭೀಕರ ಅಪಘಾತ : ಬೈಕ್‌ಗಳ ನಡುವೆ ಡಿಕ್ಕಿ, ಮೂವರ ದುರ್ಮ*ರಣ

ಹೊಸದಿಗಂತ ವರದಿ ಮಡಿಕೇರಿ:

ಬೈಕ್’ಗಳೆರಡರ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವಿಗೀಡಾದ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿ‌ ನಡೆದಿದೆ.

ಕಬ್ಬಿನಗದ್ದೆ ನಿವಾಸಿ,‌ ರ‍್ಯಾಫ್ಟಿಂಗ್ ಗೈಡ್ ಸುಬ್ರಮಣಿ (28) ತ್ಯಾಗತ್ತೂರಿನ ರಿನಾಸ್(21) ಎಂಬವರು ಸ್ಥಳದಲ್ಲೇ ಸಾವಿಗೀಡಾದರೆ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿಂಬದಿ ಸವಾರರಾದ ತ್ಯಾಗತ್ತೂರಿನ ಶ್ವಾಲಿನ್ ಹಾಗೂ ವಿರೂಪಾಕ್ಷಪುರದ ಹರೀಶ್ ಎಂಬವರ ಪೈಕಿ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.

ನಂಜರಾಯಪಟ್ಟಣದ ಮಸೀದಿ ಬಳಿ ಈ ದುರ್ಘಟನೆ ನಡೆದಿದೆ.

Must Read