March 25, 2026
Wednesday, March 25, 2026
spot_img

ಮೈಸೂರು ದಸರಾ: ಸರಕಾರದಿಂದ ಪ್ರಮೋದಾ ದೇವಿಗೆ ಬಂತು ಅಧಿಕೃತ ಆಹ್ವಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ದಸರಾಕ್ಕೆ ಸರಕಾರ ಪರವಾಗಿ ಅಧಿಕೃತ ಆಹ್ವಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ ಮಹದೇವಪ್ಪ ಅವರು ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ನೀಡಿದ್ದಾರೆ.

ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ಗೆ ಗೌರವ ಧನ ನೀಡಿ ಆಹ್ವಾನ ನೀಡಿದ್ದಾರೆ.

ಈ ವೇಳೆ ಮಾತನಾಡಿ ಸಚಿವರು, ದಸರಾಗೆ ಯಾವತ್ತೂ ಯದುವಂಶದಿಂದ ಕಿರಿಕಿರಿ ಆಗಿಲ್ಲ. ಪ್ರತಿ ದಸರಾಗೂ ಯದುವಂಶದ ಸಹಕಾರ ಇರುತ್ತದೆ. ಈ ಬಾರಿಯ ದಸರಾಗೂ ಉತ್ತಮ ಸಹಕಾರ ನೀಡುತ್ತೇವೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಕಳೆದ ಬಾರಿ ಆದ ಒಂದೆರಡು ಗೊಂದಲಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಪ್ರಮೋದಾ ದೇವಿ ಒಡೆಯರ್ ತಂದಿದ್ದಾರೆ. ಕೆಲ ಸಲಹೆ ಕೂಡ ಕೊಟ್ಟಿದ್ದು ಅವರ ಸಲಹೆ ಸ್ವೀಕರಿಸಿದ್ದೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !