ಹೊಸದಿಗಂತ ವರದಿ ವಿಜಯಪುರ:
ವಿಜಯಪುರ: 2028 ರೊಳಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಬೃಹತ್ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯದ ನೀರಾವರಿ ಯೋಜನೆ ಬಗ್ಗೆ ಜಿಲ್ಲೆಯ ಆಲಮಟ್ಟಿಯಲ್ಲಿ ಹೇಳಿಕೆ ನೀಡಿದ ಅವರು, ನಾನು, ಸಿಎಂ, ಮಹಾದಾಯಿ, ಮೇಕೆದಾಟು, ಯುಕೆಪಿ, ಭದ್ರಾ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಹಿಂದೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಅಂದಿದ್ದರು. 5300 ಕೋಟಿ ಕೊಟ್ಟಿಲ್ಲ ಅದರ ಬಗ್ಗೆಯೂ ಜ್ಞಾಪಿಸಿದ್ದೇವೆ. 5300 ಕೋಟಿ ಒಟ್ಟಿಗೆ ಕೊಡದಿದ್ದರೂ ಹಂತ ಹಂತವಾಗಿ ಕೊಡಿ ಎಂದಿದ್ದೇವೆ. ಎತ್ತಿನಹೊಳೆ ಯೋಜನೆ ನಮ್ಮ ಅವಧಿಯಲ್ಲಿ ಮುಗಿದು ಹೋಗುತ್ತೆ ಎಂದರು.
ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಕೃಷ್ಣಾ ನೀರು ಹಂಚಿಕೆ ಬಗ್ಗೆ ಕೋರ್ಟ್ ಮೊರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಂಧ್ರ ತೆಲಂಗಾಣ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಒಂದು ಕಡೆ ಕಾನೂನು ಹೋರಾಟ ಇರುತ್ತೆ, ಇನ್ನೊಂದೆಡೆ ಕೇಂದ್ರ ಜಲಶಕ್ತಿ ಮಂತ್ರಿಗಳ ಮಧ್ಯಸ್ಥಿಕೆ ವಹಿಸಲಿ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದವರನ್ನು ಕರೆಯಲಿ ಎಂದರು.
ಸುಪ್ರೀಂಕೋರ್ಟ್ ಗೆ ಬೇಗ ಇತ್ಯರ್ಥ ಮಾಡಿ ಎಂದು ಕರ್ನಾಟಕದಿಂದ ಕೇಸ್ ಹಾಕಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಇದನ್ನೂ ಓದಿ:
ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಗೆ ಯುಕೆಪಿ ಯೋಜನೆ ಅಸ್ತ್ರ, ಯೋಜನೆ ಜಾರಿಯಾಗದ ವಿಚಾರಕ್ಕೆ, ಸುಪ್ರೀಂಕೋರ್ಟ್ ಗೆ ಹೋಗಿರಲಿಲ್ಲ. ಮೊದಲು ಆಂಧ್ರ, ತೆಲಂಗಾಣ ಹೋಗಿದ್ದಾರೆ. 2050 ಕ್ಕೆ ಮುಗಿದು ಹೋಗುತ್ತೆ, ಬೇಗ ನೋಟೀಫಿಕೇಶನ್ ಮಾಡಿ ಎಂದು ಸುಪ್ರೀಂಕೋರ್ಟ್ ಗೆ ಒತ್ತಾಯ ಮಾಡ್ತಿದ್ದೇವೆ. ಮೂರು ರಾಜ್ಯಗಳಿಗೆ ನಷ್ಟ ಆಗುತ್ತೆ. ನಾವು ಅವರು ಅರೆತುಕೊಂಡು ಹೋದ್ರೆ, ಎಲ್ಲರಿಗೂ, ರೈತರಿಗೂ ಒಳ್ಳೆಯದಾಗುತ್ತದೆ ಎಂದರು.
ಯುಕೆಪಿ ಯೋಜನೆ ಹಂತ -3ಕ್ಕೆ ಭೂಸ್ವಾಧೀನ, ಪರಿಹಾರ ವಿಚಾರಕ್ಕೆ, ನವ್ಹೆಂಬರ್ ತಿಂಗಳಲ್ಲಿ ಅಂದಿನ ಸಿಎಂ, ಡಿಸಿಎಂ ಹೇಳಿದ್ದಾರೆ. ಈ ಸಲ ಬಜೆಟ್ ನಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ. ಮೂರು ವರ್ಷದೊಳಗೆ ಭೂಸ್ವಾಧೀನ ಮುಗಿಯಬೇಕು. ಯುಕೆಪಿ ಯೋಜನೆಗೆ 70 ಸಾವಿರ ಕೋಟಿ ಬೇಕಾಗುತ್ತದೆ ಎಂದರು.



