ಮೇಷ
ನಿಮ್ಮ ಮುಕ್ತ ಮಾತು ಒಳಿತಿಗೂ, ಸಮಸ್ಯೆಗೂ ಕಾರಣವಾಗಬಹುದು. ಆರ್ಥಿಕ ಚೇತರಿಕೆ. ಮನೆ ನವೀಕರಣದ ಆಶಯ ಈಡೇರಬಹುದು.
ವೃಷಭ
ವೃತ್ತಿಯಲ್ಲಿ ತಾಳ್ಮೆ ಕೆಡಿಸುವ ಪ್ರಸಂಗ. ಗುರಿಯಿಂದ ವಿಚಲಿತ ಆಗದಿರಿ. ಗಂಟಲು ನೋವಿನ ಸಮಸ್ಯೆ ಬಾಧಿಸಬಹುದು.
ಮಿಥುನ
ಹೊಸಬಗೆಯ ಕಾರ್ಯಕ್ಕೆ ತೊಡಗಿ. ಹಳೆಯದು ಬೇಸರ ಹುಟ್ಟಿಸಬಹುದು. ಸಂಗಾತಿ ಜತೆ ಭಿನ್ನಾಭಿಪಾಯ. ಮಕ್ಕಳ ಸಾಧನೆಯ ತೃಪ್ತಿ.
ಕಟಕ
ಕೆಲಸಕ್ಕೆ ಅಡ್ಡಿ ಬಂದೀತು. ಇತರರ ಸಮಸ್ಯೆ ಮೈಮೇಲೆ ಎಳೆದುಕೊಳ್ಳಬೇಡಿ. ಸಂಗಾತಿ ಜತೆಗೆ ಅನವಶ್ಯ ವಿರಸವನ್ನು ತಪ್ಪಿಸಿ.
ಸಿಂಹ
ವೃತ್ತಿಯಲ್ಲಿ ಸಾಫಲ್ಯ. ಅನ್ಯರಿಂದ ಮೆಚ್ಚುಗೆ. ಕುಟುಂಬಕ್ಕೂ ಸಮಯ ಕೊಡಿ. ಹಣದ ಸಮಸ್ಯೆ ಪರಿಹಾರ ಕಾಣಲಿದೆ. ಬಂಧು ಭೇಟಿಯ ಸಂತಸ.
ಕನ್ಯಾ
ಕುಟುಂಬದಲ್ಲಿ ಭಿನ್ನಮತ. ಸಂಬಂಧದಲ್ಲಿ ಒಡಕು. ಹಿರಿಯರ ಮಾತಿಗೆ ಕೋಪ ಮಾಡದಿರಿ. ಸಮಾಧಾನದ ವರ್ತನೆ ಒಳ್ಳೆಯದು.
ತುಲಾ
ದಿನದ ಆರಂಭದಲ್ಲಿ ತುಸು ಹಿನ್ನಡೆ. ಆದರೆ ಬಳಿಕ ಪ್ರಗತಿ ಕಾಣಲಿದೆ. ಸಹೋದ್ಯೋಗಿಗಳ ಜತೆ ವಾಗ್ವಾದ ಮಾಡದಿರಿ. ವೃಥಾ ನೆಮ್ಮದಿ ಹಾಳು.
ವೃಶ್ಚಿಕ
ಎಲ್ಲರ ಜತೆ ಇಂದು ಸೌಹಾರ್ದ ಬೆಳೆಸುವಿರಿ. ನಿಮ್ಮ ಉಲ್ಲಾಸದ ಮನಸ್ಥಿತಿ ಅದಕ್ಕೆ ಕಾರಣ. ಕೌಟುಂಬಿಕ ಕಿರಿಕಿರಿ ಪರಿಹಾರ. ಆಪ್ತ ಬಂಧುವಿನ ಭೇಟಿ.
ಧನು
ಕಠಿಣ ಪರಿಶ್ರಮ ದಿಂದ ಯಶಸ್ಸು. ಆರ್ಥಿಕ ಪರಿಸ್ಥಿತಿ ಸಾಧಾರಣ. ವೃತ್ತಿ ಸಂಬಂಽತ ಸಮಸ್ಯೆ ಪರಿಹಾರದಿಂದ ನೆಮ್ಮದಿ. ಶೀತಬಾಧೆ ಕಾಡಬಹುದು.
ಮಕರ
ಒತ್ತಡದ ದಿನ. ಎಂದಿಗಿಂತ ಹೆಚ್ಚೇ ಕೆಲಸದ ಹೊರೆ. ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇರಲಾರದು. ಆಹಾರ ಪಥ್ಯ ಪಾಲಿಸಿರಿ.
ಕುಂಭ
ಸಂವಹನ ಕೊರತೆ. ಇದರಿಂದ ಆಪ್ತರ ಜತೆಗಿನ ಸಂಬಂಧ ಕೆಡಬಹುದು. ಬಿಗುಮಾನ ಬಿಡಿ. ಹೊಂದಾಣಿಕೆ ಒಳಿತು. ಆರ್ಥಿಕ ಸ್ಥಿತಿ ಉತ್ತಮ.
ಮೀನ
ಆರ್ಥಿಕ ವ್ಯವಹಾರ ಸುಲಲಿತ. ಚಿಂತೆ ಪರಿಹಾರ. ಮನೆಯಲ್ಲಿ ಯಾರ ಜತೆಗೂ ಜಗಳ ಮಾಡಬೇಡಿ. ಪರಿಸ್ಥಿತಿ ವಿಕೋಪಕ್ಕೆ ಹೋದೀತು.



