September 2, 2026
Wednesday, September 2, 2026
spot_img

ಕೆ.ಆರ್‌ ಮಾರ್ಕೆಟ್‌ಗೆ ಕೊತ್ತಂಬರಿ ಸೊಪ್ಪು ತರೋಕೆ ಬಂದ್ರೂ ಸ್ಮಾರ್ಟ್‌ ಪಾರ್ಕಿಂಗ್‌ ಫೀಸ್‌ ಕಟ್ಟಲೇಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಜೀವನ ಮಾಡೋದು ದುಬಾರಿ ಅನ್ನೋ ಮಾತು ಇನ್ನೇನು ನಿಜವಾಗುವಂತೆಯೇ ಕಾಣಿಸುತ್ತಿದೆ. ಐತಿಹಾಸಿಕ ಕೆಆರ್‌ ಮಾರ್ಕೆಟ್‌ನ ಮುಂದೆ ಸಾವಿರಾರು ವಾಹನಗಳು ನಿತ್ಯವೂ ನಿಂತಿರುವುದನ್ನು ನೋಡಿದ್ದೀರಿ. ಈ ಗಾಡಿಗಳನ್ನು ಪಾರ್ಕ್‌ ಮಾಡೋದಕ್ಕೆ ಇನ್ಮುಂದೆ ಫೀಸ್‌ ಕೊಡಬೇಕಿದೆ.

ಹೌದು, ರಾಜ್ಯ ಸರ್ಕಾರ ಹೊಸ ರೂಲ್ಸ್‌ ಜಾರಿ ಮಾಡಿದ್ದು, ಸ್ಮಾರ್ಟ್‌ ಪಾರ್ಕಿಂಗ್‌ ನಿಯಮವನ್ನು ಪಾಲಿಸಿ ಹಣ ಪಾವತಿ ಮಾಡಲೇಬೇಕಿದೆ. ಮಾರ್ಕೆಟ್‌ಗೆ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಾರೆ. ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಒಂದು ವಾಹನದಿಂದ ನೂರಾರು ವಾಹನಗಳಿಗೂ ತೊಂದರೆ ಆಗುತ್ತದೆ. ಇದರ ಜೊತೆಗೆ ಮಾರ್ಕೆಟ್‌ನ ಸ್ವಚ್ಛತೆ ಹಾಗೂ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ವಾಹನಗಳಿಗೆ ಪಾರ್ಕಿಂಗ್‌ ಚಾರ್ಜ್‌ ಹಾಕಲಾಗುತ್ತಿದೆ.

ಡಿಜಿಟಲ್‌ ಸ್ಮಾರ್ಟ್‌ ಗೇಟ್‌

ಕೆ. ಆರ್‌. ಮಾರ್ಕೆಟ್‌ಗೆ ಹೋಗುವ ಮುನ್ನ ಪ್ರತೀ ಗಾಡಿಯೂ ಡಿಜಿಟಲ್‌ ಸ್ಮಾರ್ಟ್‌ ಗೇಟ್‌ ವ್ಯವಸ್ಥೆಯನ್ನು ದಾಟಿ ಹೋಗಬೇಕಿದೆ. ಹೀಗೆ ತೆರಳುವಾಗ ನಿಮ್ಮ ವಾಹನ ಸಂಖ್ಯೆ, ಎಷ್ಟೊತ್ತಿಗೆ ನಿಮ್ಮ ಗಾಡಿ ಮಾರ್ಕೆಟ್‌ ಒಳಕ್ಕೆ ಹೋಗಿದೆ ಎನ್ನುವ ಮಾಹಿತಿ ರೆಕಾರ್ಡ್‌ ಆಗುತ್ತದೆ. ಅದಕ್ಕೆ ಅನುಸಾರವಾಗಿ ಹಣ ನೀಡಬೇಕಾಗುತ್ತದೆ.

ಹೊಸ ರೂಲ್ಸ್‌ ಏನೇನು?

ಮಾರುಕಟ್ಟೆಯೊಳಗೆ ಪ್ರವೇಶಿಸುವ ಯಾವುದೇ ವಾಹನ ಅಂದರೆ ನೀವೊಂದು ಕಟ್ಟು ಕೊತ್ತಂಬರಿ ಕೊಳ್ಳೋಕೆ ಸ್ಕೂಟಿಯಲ್ಲಿ ಬಂದರೂ ಪಾರ್ಕಿಂಗ್‌ ಚಾರ್ಜಸ್‌ ನೀಡಲೇಬೇಕು. ಹಾಗೆ ಸರಕು ಗಾಡಿಗಳಿಗೂ ಪ್ರತ್ಯೇಕ ಫೀಸ್‌ ಹಾಕಲಾಗುತ್ತಿದೆ. ಇದರ ಜೊತೆಗೆ ಮಾರುಕಟ್ಟೆಯೊಳಗೆ ತರುವ ಸರಕುಗಳ ಮೇಲೆಯೂ ದರ ವಿಧಿಸಲಾಗುತ್ತಿದೆ. ಒಳಕ್ಕೆ ಹೋಗುವ ಪ್ರತೀ ಮೂಟೆಗೂ ಐದು ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ಯಾವ ಗಾಡಿಗೆ ಎಷ್ಟು ಫೀಸ್‌?

ದೊಡ್ಡ ವಾಹನಗಳಿಗೆ 350. ರೂ
ಮಿನಿ ವ್ಯಾನ್‌ ಹಾಗೂ ಟೆಂಪೋಗಳಿಗೆ 100 ರೂಪಾಯಿ
ಗೂಡ್ಸ್‌ ಆಟೋಗೆ – 75 ರೂಪಾಯಿ
ಬೈಕ್‌ ಹಾಗೂ ಸ್ಕೂಟಿಗೆ – ಗಂಟೆಗೆ 15 ರೂಪಾಯಿ
ಕಾರ್‌ ಹಾಗೂ ಯಾವುದೇ ನಾಲ್ಕು ಚಕ್ರದ ಗಾಡಿಗೆ- ಗಂಟೆಗೆ 30 ರೂಪಾಯಿ
ಇಡೀ ದಿನ ಗಾಡಿ ನಿಲ್ಲಿಸಿದ್ರೆ- 175-275 ರೂಪಾಯಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !