ಹೊಸದಿಗಂತ ವರದಿ ಗೋಕರ್ಣ:
ಇಲ್ಲಿನ ಪ್ರಸಿದ್ಧ ಶ್ರೀಮಹಾಗಣಪತಿ ದೇವಾಲಯದಲ್ಲಿ ದೇವರ ದರುಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೋರ್ವರ ಬ್ಯಾಗಿನಿಂದ ಬಂಗಾರದ ಸರ ಮತ್ತು ನಗದು ಹಣ ಕಳ್ಳತನ ನಡೆಸಿರುವ ನಾಲ್ಕು ಜನ ಮಹಿಳೆಯರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಬೆಟಗೇರಿಯ ಗಾಂಧಿನಗರದ ಭೀಮವ್ವ, ಶಾಂತಾ, ಶೋಭಾ ಮತ್ತು ಕುಮಾರಿ ಎನ್ನುವವರು ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ ವಕೀಲೆ ಮಂಜುಳಾ ಶಿಂಧೆ ಎನ್ನುವವರು ಗಣಪತಿ ದೇವಾಲಯದಲ್ಲಿ ದರುಶನಕ್ಕೆ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಆರೋಪಿತರು ಭಕ್ತರ ಸೋಗಿನಲ್ಲಿ ಬಂದು ಬ್ಯಾಗಿನಲ್ಲಿದ್ದ ಸುಮಾರು 1.80 ಲಕ್ಷ ಮೌಲ್ಯದ ಬಂಗಾರದ ಸರ ಮತ್ತು 15 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದರು.
ಇದನ್ನೂ ಓದಿ:
ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿತರನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.



