September 3, 2026
Thursday, September 3, 2026
spot_img

ಅಂತ್ಯಕ್ರಿಯೆಗೆ ಹೋಗಿದ್ದ ವೇಳೆ ದುರ್ಘಟನೆ: ಖಾಲಿ ಮನೆಗೆ ಕನ್ನ ಹಾಕಿ ಚಿನ್ನಾಭರಣ, ನಗದು ಕದ್ದ ಖದೀಮರು

ಹೊಸದಿಗಂತ ವರದಿ ಹಾಸನ :

ಹಿರಿಯ ಸಹೋದರನ ಅಂತ್ಯಕ್ರಿಯೆಗೆ ಕುಟುಂಬ ಸಮೇತ ಮಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ, ಮನೆ ಖಾಲಿ ಇರುವುದನ್ನು ಗಮನಿಸಿದ ಖದೀಮರು ಸಹೋದರರ ಎರಡು ಮನೆಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಪಟ್ಟಣದ ರಾಮನಗರದಲ್ಲಿ ನಡೆದಿದೆ.

ಮಂಜಪ್ಪ ಹಾಗೂ ಗವಿಯಪ್ಪ ಎಂಬ ಸಹೋದರರು ಹಿರಿಯ ಅಣ್ಣನ ಅಂತ್ಯಕ್ರಿಯೆಗಾಗಿ ಕುಟುಂಬ ಸಮೇತ ಮಂಗಳೂರಿಗೆ ತೆರಳಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಹಂಚು ತೆಗೆದು ಒಳನುಗ್ಗಿದ್ದಾರೆ. ನಂತರ ಗಾಡ್ರೇಜ್ ಬೀರುವಿನ ಲಾಕ್ ಒಡೆದು ಸುಮಾರು 10 ಲಕ್ಷ ರೂ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ 2.50 ಲಕ್ಷ ರೂ ನಗದು ದೋಚಿದ್ದಾರೆ ಎನ್ನಲಾಗಿದೆ.

ತಡರಾತ್ರಿ ಕುಟುಂಬಸ್ಥರು ಮಂಗಳೂರಿನಿಂದ ವಾಪಸ್ಸಾದಾಗ ಸಹೋದರರ ಎರಡೂ ಮನೆಗಳಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !