ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ಗೆಳತಿ, ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನಲ್ಲಿರುವ ಬ್ಯಾರಕ್‌ನಲ್ಲಿ ಅಲರ್ಜಿ ಹಾಗೂ ಸೋಂಕಿನ ಭಯ ಇದೆ ಹಾಗಾಗಿ ನನಗೆ ಬೇರೆ ಬ್ಯಾರಕ್‌ಗೆ ಹೋಗೋಕೆ ಅವಕಾಶ ಕೊಡಿ ಎಂದು ಪವಿತ್ರಾ ಕೋರ್ಟಗೆ ಮನವಿ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕೈಯಲ್ಲಿ ಫೋನ್ ಪತ್ತೆಯಾಗಿತ್ತು. ಇದಾದ ನಂತರ ಪ್ರತೀ ಸೆಕ್ಯುರಿಟಿಯನ್ನು ಡಬಲ್ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಬಳಿ ಫೋನ್ ಸಿಕ್ಕ ನಂತರ ಪವಿತ್ರಾ ಗೌಡರನ್ನು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿತ್ತು. ಈ ಹಿಂದೆ ಇಬ್ಬರು ಕೈದಿಗಳ ಜತೆ ಇದ್ದ ಪವಿತ್ರಾರನ್ನು 16 ಕೈದಿಗಳಿರುವ ಕಡೆ ಶಿಫ್ಟ್ ಮಾಡಲಾಗಿದೆ. ಇಲ್ಲಿ ಜನ ಹೆಚ್ಚಿದ್ದಾರೆ ಏನೇನೋ ಸೋಂಕು, ಅಲರ್ಜಿ ಆಗುತ್ತಿದೆ ಈ ಹಿನ್ನೆಲೆ ನನ್ನನ್ನು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಿ ಎಂದು 59ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ಸಂಜೆಯೇ ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಪವಿತ್ರಾ ಬೇರೆ ಬ್ಯಾರಕ್‌ಗೆ ಹೋಗ್ತಾರಾ ಇಲ್ವಾ ಕಾದುನೋಡಬೇಕಿದೆ.



