September 3, 2026
Thursday, September 3, 2026
spot_img

ಮೂರು ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪಕ್ಕದಮನೆಯ ಕಾಮುಕ ! ಖಾಸಗಿ ಭಾಗದಲ್ಲಿ ತೀವ್ರ ರಕ್ತಸ್ರಾವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೂರು ತಿಂಗಳ ಮಗುವಿನ ಮೇಲೆ ಪಕ್ಕದ ಮನೆಯ ಕಾಮುಕನೊಬ್ಬ ಅತ್ಯಾಚಾರ ಮಾಡಿರುವ ಅಸಹ್ಯಕರ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ಹಳ್ಳಿಯೊಂದರಲ್ಲಿ ನಡೆದಿದೆ. ಮನೆಯೊಳಗೆ ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಆಟ ಆಡಿಸುತ್ತೇನೆ ಎಂದು ಹೇಳಿ ಎತ್ತುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಪಕ್ಕದ ಮನೆಯ ಕಾಮುಕ ಜಿತೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಮನೆಯ ಬಾಗಿಲು ತೆರೆದೇ ಇತ್ತು ಎಂದು ಹೇಳಲಾಗಿದೆ. ಮಗು ಮಲಗಿದೆ ಎಂದು ತಾಯಿ ಅಡುಗೆ ಮಾಡಲು ಹಾಗೂ ತಂದೆ ಮನೆಯಿಂದಲೇ ಆಫೀಸಿನ ಕೆಲಸ ಮಾಡುತ್ತಿದ್ದರು. ಪಕ್ಕದ ಮನೆಯ ವ್ಯಕ್ತಿಯಾದ ಕಾರಣ ಆತ ಪೋಷಕರಿಗೆ ಪರಿಚಯವಾಗಿದ್ದ. ನೆರೆಹೊರೆಯ ಜನರು ಮಗುವನ್ನು ಆಡಿಸಲು ಆಗಾಗ ಮನೆಗೆ ಬರುತ್ತಿದ್ದರು. ಹೀಗಾಗಿ ಮಗುವನ್ನು ಆಟ ಆಡಿಸಲು ಬಂದಿದ್ದಾನೆ ಎಂದು ಪೋಷಕರು ತಿಳಿದುಕೊಂಡಿದ್ದಾರೆ. ಮಗುವನ್ನು ಎತ್ತಿಕೊಂಡು ಆಟ ಆಡಿಸುತ್ತಾ ಹಾಗೆ ಮನೆಯಿಂದ ಹೊರಗೆ ಎತ್ತಿಕೊಂಡು ಹೋಗಿದ್ದಾನೆ. ತನ್ನ ಮನೆಗೆ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ನಂತರ ಅಳುತ್ತಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿ ಹೊರಟಿದ್ದಾನೆ.

ಮಗು ಮಲಗಿ ಜೋರಾಗಿ ಅಳುತ್ತಲೇ ಇರುವುದನ್ನು ಗಮನಿಸಿದ ತಾಯಿ ಓಡಿಬಂದಿದ್ದಾರೆ. ಮಗುವಿನ ಖಾಸಗಿ ಅಂಗದಿಂದ ರಕ್ತ ಸೋರುತ್ತಿದ್ದು, ಮಗು ಉಸಿರುಕಟ್ಟುವಂತೆ ಕಣ್ಣೀರು ಹಾಕಿದೆ. ಪಕ್ಕದ ಮನೆಯ ನಂಬಿಕಸ್ಥ ವ್ಯಕ್ತಿ ಎಂದು ಅವರು ಅನುಮಾನ ಪಟ್ಟಿಲ್ಲ. ತದನಂತರ ಕಂದನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ಮಗುವಿನ ತಂದೆ ಜಿತೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ.

ಎಷ್ಟೇ ಹತ್ತಿರದ ನೆಂಟರಾದರೂ ಮಗುವನ್ನು ನೀಡುವ ಮುನ್ನ ಒಮ್ಮೆ ಆಲೋಚಿಸಿ. ಮಕ್ಕಳ ಮಾಮ, ಚಿಕ್ಕಪ್ಪ, ಅಜ್ಜನಿಂದಲೇ ಅತ್ಯಾಚಾರವಾಗುತ್ತದೆ. ಇನ್ನು ಪಕ್ಕದ ಮನೆಯವರು ಯಾವ ಲೆಕ್ಕ! ಮಗು ಸದಾ ಕಣ್ಮುಂದೆಯೇ ಇರುವಂತೆ ನೋಡಿಕೊಳ್ಳಿ. ಮಕ್ಕಳನ್ನು ಕಾಪಾಡುವುದು ಪೋಷಕರ ಜವಾಬ್ದಾರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !