ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿನ ಟ್ಯಾಂಕರ್ವೊಂದು ಪಲ್ಟಿಯಾದ ಪರಿಣಾಮ ಹೆಚ್ಚು ಕಡಿಮೆ 14 ಸಾವಿರ ಲೀಟರ್ ಹಾಲು ರಸ್ತೆಯ ಮೇಲೆ ಹರಿದುಹೋದ ಘಟನೆ ಬೆಂಗಳೂರಿನ ಹೆಬ್ಬಾಳ ಮುಖ್ಯರಸ್ತೆಯಲ್ಲಿ ನಡೆದಿದೆ.
ಹಾಲುಮಯವಾದ ರಸ್ತೆ
KMFಗೆ ಹಾಲು ಸಾಗಿಸುತ್ತಿದ್ದ ವೇಳೆ ಟ್ಯಾಂಕರ್ ಏಕಾಏಕಿ ಬ್ರೇಕ್ ಫೇಲ್ ಆಗಿದ್ದು, ಗಾಡಿ ನಿಯಂತ್ರಣಕ್ಕೆ ಬಾರದೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿದೆ. ಗಾಡಿ ಪಲ್ಟಿಯಾಗಿದ್ದೆ ತಡ 14 ಸಾವಿರ ಲೀಟರ್ ಕ್ಷಣಾರ್ಧದಲ್ಲೇ ರಸ್ತೆಯಲ್ಲಿ ಹರಿದು ಹೋಗಿ, ರಸ್ತೆಯೆಲ್ಲ ಹಾಲುಮಯವಾಗಿತ್ತು.
ಇದನ್ನೂ ಓದಿ:
ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ನೆರವಿಗೆ ಧಾವಿಸಿದ ಸಾರ್ವಜನಿಕರು ಚಾಲಕನನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜತೆಗೆ ಪಲ್ಟಿಯಾಗಿದ್ದ ಟ್ಯಾಂಕರ್ನಿಂದ ಮತ್ತಷ್ಟು ಹಾಲು ಸೋರಿಕೆಯಾಗದಂತೆ ಅದನ್ನು ನಿಲ್ಲಿಸುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹೆಬ್ಬಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ನಿಜವಾಗಿಯೂ ಬ್ರೇಕ್ ವೈಫಲ್ಯವೇ ಕಾರಣವೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



