ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನಲ್ಲಿ ಸದ್ಯಕ್ಕಂತೂ ಯಾವ ಸಿನಿಮಾ ಮೇಲೂ ಇರದಷ್ಟು ದೊಡ್ಡ ಮಟ್ಟದ ಹೈಪ್ ಇರೋದು ಸಂಜಯ್ ಲೀಲಾ ಭನ್ಸಾಲಿ ಅವರ ‘ಲವ್ & ವಾರ್’ ಸಿನಿಮಾ ಮೇಲೆ. ಯಾಕಂದ್ರೆ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತೆ ವಿಕ್ಕಿ ಕೌಶಲ್ ಮೂರು ಕ್ರೇಜಿ ಸ್ಟಾರ್ಸ್ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗ ಈ ಸಿನಿಮಾದಿಂದ ಫ್ಯಾನ್ಸ್ಗೆ ಒಂದು ಬಿಗ್ ಅಪ್ಡೇಟ್ ಬಂದಿದೆ. ಹೌದು, ಈ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿ ಪ್ಯಾಕಪ್ ಆಗಿದೆ.

ತುಂಬಾ ದಿನಗಳಿಂದ ಗ್ರ್ಯಾಂಡ್ ಆಗಿ ನಡೀತಿದ್ದ ಶೂಟಿಂಗ್ ಕೊನೆಗೂ ಮುಗಿದಿದ್ದು, ಇಡೀ ಟೀಮ್ ಪ್ಯಾಕಪ್ ಮಾಡಿದೆ. ಡೈರೆಕ್ಟರ್ ಸಂಜಯ್ ಲೀಲಾ ಭನ್ಸಾಲಿ, ರಣಬೀರ್, ಆಲಿಯಾ, ವಿಕ್ಕಿ ಸೇರಿದಂತೆ ಇಡೀ ಶೂಟಿಂಗ್ ಯೂನಿಟ್ ಕೊನೆ ದಿನ ಸೆಟ್ನಲ್ಲಿ ಒಬ್ಬರಿಗೊಬ್ಬರು ಹಗ್ ಮಾಡಿ, ಭಾವುಕರಾಗಿ ಶೂಟಿಂಗ್ ಮುಗಿಸಿದ್ದಾರೆ. ಭನ್ಸಾಲಿ ಅವರ ಸಿನಿಮಾಗಳು ಅಂದ್ರೆನೆ ಅದ್ದೂರಿತನ, ಅದ್ಭುತ ಲೊಕೇಷನ್ ಮತ್ತು ಮೈ ಜುಮ್ ಅನ್ನೋ ಕಥೆ. ಈ ಸಿನಿಮಾದಲ್ಲೂ ಅದೇ ಲೆವೆಲ್ ಮ್ಯಾಜಿಕ್ ಇರಲಿದೆ ಅಂತ ಟೀಮ್ ಹೇಳ್ತಿದೆ.

ಶೂಟಿಂಗ್ ಮುಗಿದ ತಕ್ಷಣ ಭನ್ಸಾಲಿ ಅವರು ಸ್ವಲ್ಪವೂ ಲೇಟ್ ಮಾಡದೆ ಎಡಿಟಿಂಗ್, ಗ್ರಾಫಿಕ್ಸ್, ಮ್ಯೂಸಿಕ್, ವಿಎಫ್ಎಕ್ಸ್ ಮತ್ತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ದುಮುಕಿದ್ದಾರೆ. ಇನ್ನು ಈ ಸಿನಿಮಾ ಯಾವಾಗ ರಿಲೀಸ್ ಎಂದು ಕಾಯ್ತಿರೋ ಫ್ಯಾನ್ಸ್ಗೆ ಮೇಕರ್ಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. 2027ರ ಜನವರಿ 21ರಂದು ಈ ಸಿನಿಮಾ ಬಿಗ್ ಸ್ಕ್ರೀನ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದೆ.

ಒಟ್ಟಿನಲ್ಲಿ ರಣಬೀರ್-ಆಲಿಯಾ ರೊಮ್ಯಾನ್ಸ್, ವಿಕ್ಕಿ ಕೌಶಲ್ ಅವರ ಪವರ್ಫುಲ್ ಆಕ್ಟಿಂಗ್ ಮತ್ತೆ ಭನ್ಸಾಲಿ ಅವರ ಮಾಸ್ಟರ್ಮೈಂಡ್ ಎಲ್ಲವೂ ಸೇರಿ ‘ಲವ್ & ವಾರ್’ ಥಿಯೇಟರ್ನಲ್ಲಿ ದೊಡ್ಡ ಸುನಾಮಿಯನ್ನೇ ಎಬ್ಬಿಸೋದಂತೂ ಗ್ಯಾರಂಟಿ. ಬಾಲಿವುಡ್ನ ಈ ಬಿಗ್ ಬಜೆಟ್ ಮಲ್ಟಿಸ್ಟಾರರ್ ನೋಡೋಕೆ ಈಗಿಂದಲೇ ಕೌಂಟ್ಡೌನ್ ಸ್ಟಾರ್ಟ್ ಆಗಿದೆ!



