October 23, 2026
Friday, October 23, 2026
spot_img

ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಮತ್ತೊಂದು ತಿರುವು; ಪತ್ರಕರ್ತನ ಸಹೋದ್ಯೋಗಿ ಸಾವಿನ ಬಗ್ಗೆ ಎಚ್‌ಡಿಕೆ ಪ್ರಸ್ತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹಲ್‌ಚಲ್‌ ಎಬ್ಬಿಸಿರುವ ಸ್ಟಿಂಗ್‌ ಆಪರೇಷನ್‌ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ. ಇತ್ತೀಚೆಗಷ್ಟೇ ಸ್ಟಿಂಗ್‌ ಆಪರೇಷನ್‌ ಮಾಡಿದ ಪತ್ರಕರ್ತನ ಬಗ್ಗೆ ಎಚ್‌ಡಿಕೆ ಮಾತನಾಡಿದ್ದು, ಇದೀಗ ಅವರ ಸಹೋದ್ಯೋಗಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಪತ್ರಕರ್ತನ ಜೊತೆ ಕೆಲಸ ಮಾಡುತ್ತಿದ್ದ ವಿಕ್ಕಿ ಎನ್ನುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪೊಲೀಸರು ಯುಟಿಆರ್‌ ಮಾಡಿ ಪ್ರಕರಣವನ್ನು ಕ್ಲೋಸ್‌ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟು 12 ಸ್ಟಿಂಗ್ ವಿಡಿಯೋ ಇದೆ. ಈ ಬಗ್ಗೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ನನಗೆ ಮಾಹಿತಿ ನೀಡಿದ್ದಾರೆ. ಪತ್ರಕರ್ತನಿಗೆ ಸುಮ್ಮನೆ ಹೆಸರಿಗೆ ಸಮನ್ಸ್‌ ನೀಡಿದ್ದಾರೆ ಅಷ್ಟೆ. ತನಿಖಾಧಿಕಾರಿ ಅಜಯ್ ಹಿಲೋರಿ ಮೇಲೆಯೇ ಐಎಂಎ ಕೇಸ್ ಇತ್ತು. ಸಿದ್ದರಾಮಯ್ಯ ಹೆಸರು ಹಾಳು ಮಾಡುವುದಕ್ಕೆ ಹೊರಟ್ಟಿದ್ದರು. ಇಂದು ಆ ಪತ್ರಕರ್ತ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಹಿಲೋರಿಗೆ ಇದ್ದ ವಕೀಲರನ್ನೇ ಮಾಧ್ಯಮ ಮುಖ್ಯಸ್ಥರಿಗೆ ನೇಮಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ ಎಚ್‌ಡಿಕೆ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾದವರು. ಅವರನ್ನು ಮನೆಯಲ್ಲಿ ಕೂರಿಸಿದ್ದೀರಿ. ಅವರನ್ನು ಬಿಟ್ಟರೆ ನಾಯಕರು ಎಂದು ಹೇಳಿಕೊಳ್ಳೋಕೆ ನಿಮ್ಮಲ್ಲಿ ಯಾರಿದ್ದಾರೆ? ಅವರಿರೋದಕ್ಕೆ ನಿಮ್ಮ ಪಕ್ಷದ ಅಸ್ಥಿತ್ವ ಉಳಿದುಕೊಂಡಿದೆ. ಇಲ್ಲವಾದರೆ ನಿಮ್ಮ ಪಕ್ಷ ಮೂಲೆಯಲ್ಲಿ ಇರುತ್ತಿತ್ತು. ಈ ಕೇಸ್‌ನಲ್ಲಿ ಸಿದ್ದರಾಮಯ್ಯ ಹೆಸರು ಎಳೆದಿದ್ದೀರಿ ಎಂದು ಗರಂ ಆದರು.

Must Read